ಕ್ರಿಕೆಟ್

ಮಹಿಳಾ ಕ್ರಿಕೆಟ್ ಗೆ ದೊಡ್ಡ ಪ್ರಮಾಣದ ಉತ್ತೇಜನ, ಟಿ20 ವಿಶ್ವಕಪ್ ಪ್ರಶಸ್ತಿ ಮೊತ್ತ ಹೆಚ್ಚಿಸಿದ ಐಸಿಸಿ

Srinivasamurthy VN

ಮೆಲ್ಬೋರ್ನ್: ಮುಂದಿನ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯುವ ಮಹಿಳಾ ಟಿ-20 ವಿಶ್ವಕಪ್‍ನ ಪ್ರಶಸ್ತಿ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸುವ ಮೂಲಕ ಮಹಿಳಾ ಕ್ರಿಕೆಟ್ ಗೆ ದೊಡ್ಡ ಪ್ರಮಾಣದ ಉತ್ತೇಜನ ನೀಡಲಾಗಿದೆ.

ಹೌದು.. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಹಿಳೆಯ ಟಿ20 ವಿಶ್ವಕಪ್ ಟೂರ್ನಿಗಾಗಿ ನಿಗದಿ ಪಡಿಸಲಾಗಿದ್ದ ಬಹುಮಾನದ ಮೊತ್ತವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ, ಬರೊಬ್ಬರಿ ಶೇ.320ರಷ್ಟು ಹೆಚ್ಚಳ ಮಾಡಿದೆ. ಅದರಂತೆ ಟೂರ್ನಿಯ ವಿಜೇತ ತಂಡ 1 ದಶಲಕ್ಷ ಡಾಲರ್ ನಗದು ಪಡೆದರೆ, ರನ್ನರ್ ಅಪ್ ತಂಡ 5 ಲಕ್ಷ ಡಾಲರ್ ಹಣ ಪಡೆಯಲಿದೆ.

ಪುರುಷರ ಐಸಿಸಿ ಟಿ-20 ವಿಶ್ವಕಪ್ ಚಾಂಪಿಯನ್ ತಂಡ 1.6 ದಶಲಕ್ಷ ಯುಎಸ್ ಡಾಲರ್ ಮೊತ್ತವನ್ನು ಪಡೆಯಲಿದೆ. ಮುಂದಿನ ಟಿ20 ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ನಾದರೆ ತಂಡಕ್ಕೆ ಯುಎಸ್ ಡಾಲರ್ 600.000 ನೀಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.

ಈ ಬಗ್ಗೆ ಮಾತನಾಡಿರುವ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ಅವರು, ಈ ಹಿಂದೆಯೇ ನಾವು ಈ ಬಗ್ಗೆ ತೀರ್ಮಾನ ಕೈಗೊಂಡಿದ್ದೆವು. ಮಹಿಳಾ ಕ್ರಿಕೆಟ್ ಉತ್ತೇಜನಕ್ಕೆ ಐಸಿಸಿ ಬದ್ಧವಾಗಿದ್ದು, ಈ ಕುರಿತಂತೆ ಐಸಿಸಿ ಕ್ರಮಕೈಗೊಳ್ಳುತ್ತಿದೆ ಎಂದು ಹೇಳಿದರು.

SCROLL FOR NEXT