ಕ್ರಿಕೆಟ್

ಕರ್ನಾಟಕ ತಂಡ ಸೇರಿದ 'ದ್ವಿಶತಕ ವೀರ' ಮಯಾಂಕ್ ಅಗರವಾಲ್

Vishwanath S

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕರ್ನಾಟಕದ ಮಯಾಂಕ್ ಅಗರ್ ವಾಲ್, ಕರ್ನಾಟಕ ತಂಡ ಸೇರಿಕೊಂಡಿದ್ದಾರೆ. 

ಬುಧವಾರ ವಿಜಯ ಹಜಾರೆ ಏಕದಿನ ಸರಣಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಕರ್ನಟಕ, ಚತ್ತೀಸ್ ಗಢ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಸೋಮವಾರ ತಂಡವನ್ನು ಪ್ರಕಟಿಸಲಾಗಿತ್ತು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ ನಾಲ್ಕನೇ ದಿನಕ್ಕೆ ಮುಗಿದಿದೆ. ಹೀಗಾಗಿ ಕರ್ನಾಟಕದ ಸ್ಟಾರ್ ಆಟಗಾರ ಮಾಯಾಂಕ್ ಅಗರ್ ವಾಲ್ ಮಹತ್ವದ ಪಂದ್ಯದಲ್ಲಿ ಕರ್ನಾಟಕ ತಂಡ ಸೇರಿಕೊಂಡಿದ್ದಾರೆ. 

ಭರವಸೆಯ ಆಟಗಾರ ಅಭಿಷೇಕ್ ರೆಡ್ಡಿ ಅವರ ಸ್ಥಾನದಲ್ಲಿ ಮಯಾಂಕ್ ಬ್ಯಾಟ್ ಮಾಡಲಿದ್ದಾರೆ. ಮಯಾಂಕ್ ತಂಡಕ್ಕೆ ಮರಳಿದ್ದರಿಂದ ಬ್ಯಾಟಿಂಗ್ ಬಲ ಹೆಚ್ಚಿದೆ. ಮನೀಷ್ ಪಾಂಡೆ ಪಡೆ ಈ ಬಾರಿ ವಿಜಯ ಹಜಾರೆ ಏಕದಿನ ಸರಣಿಯ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಮಾಯಾಂಕ್ ದ್ವಿಶತಕ ಸಾಧನೆ (215 ರನ್) ಮಾಡಿದ್ದರು.

SCROLL FOR NEXT