ಕ್ರಿಕೆಟ್

ಬಾಂಗ್ಲಾದೇಶ ವಿರುದ್ಧ ಸರಣಿ: ಕೊಹ್ಲಿಗೆ ವಿಶ್ರಾಂತಿ, ಶಿವನ್ ದುಬೆಗೆ ಚೊಚ್ಚಲ ಅವಕಾಶ

Srinivas Rao BV

ದೆಹಲಿ: ಮುಂಬರುವ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಭಾರತ ತಂಡಗಳ ಆಯ್ಕೆ ಮಾಡಲಾಗಿದೆ. ಅಂದುಕೊಂಡಂತೆ ನಾಯಕ ವಿರಾಟ್ ಕೊಹ್ಲಿ ಅವರು ಚುಟುಕು ಸರಣಿಗೆ ವಿಶ್ರಾಂತಿ ಪಡೆಯಲಿದ್ದು, ಟೆಸ್ಟ್ ಗೆ ಸರಣಿಗೆ ಮರಳಲಿದ್ದಾರೆ. ಟಿ 20 ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. 

ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ 15 ಸದಸ್ಯರ ಭಾರತ ತಂಡಕ್ಕೆ ಮುಂಬೈನ ಆಲ್‌ರೌಂಡರ್ ಶಿವನ್ ದುಬೆ ಅವರನ್ನು ಮೊದಲ ಬಾರಿ ಆಯ್ಕೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿರುವ ಹಾರ್ದಿಕ್ ಪಾಂಡ್ಯ ಅವರು ಸ್ಥಾಕ್ಕೆ ಶಿವನ್ ದುಬೆ ಆಯ್ಕೆ ಮಾಡಲಾಗಿದೆ. 2017ರಲ್ಲಿ ದುಬೆ ಪ್ರಥಮ ದರ್ಜೆ ಹಾಗೂ ಲಿಸ್ಟ್‌ ಪಂದ್ಯಗಳಿಗೆ ಪದಾರ್ಪಣೆ ಮಾಡಿದ್ದರು. ಇದೀಗ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿ ಸಂಚಲನ ಮೂಡಿಸಿದ್ದ ಕೇರಳದ ಸಂಜು ಸ್ಯಾಮ್ಸನ್ ಅವರಿಗೂ ಟಿ-20 ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ನಿಯಮಿತಿ ವಿಕೆಟ್ ಕೀಪರ್ ರಿಷಭ್ ಪಂತ್ ಜತೆಗೆ ಎರಡನೇ ವಿಕೆಟ್ ಕೀಪರ್ ಆಗಿ ಸ್ಯಾಮ್ಸನ್ ಅವರನ್ನು ಪರಿಗಣಿಸಲಾಗಿದೆ.

ಯಜುವೇಂದ್ರ ಚಾಹಲ್ ಟಿ-20 ತಂಡಕ್ಕೆ ಮರಳಿದ್ದು, ಮುಂಬೈ ಸೀಮರ್ ಶಾರ್ದೂಲ್ ಠಾಕೂರ್ ಅವರನ್ನು ವಿಶ್ರಾಂತಿ ಪಡೆದಿರುವ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಕಾ ಬದಲಿಗೆ ಆಯ್ಕೆ ಮಾಡಲಾಗಿದೆ. ಫಿಟ್ನೆಸ್ ಸಮಸ್ಯೆಯಿಂದ ನವದೀಪ್ ಸೈನಿ ಅವರನ್ನು ಕೈ ಬಿಡಲಾಗಿದೆ.

ಟೆಸ್ಟ್‌ ತಂಡದಲ್ಲಿ ಬದಲಾವಣೆ ಇಲ್ಲ: 
ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ತಂಡವನ್ನೇ ಯಾವುದೇ ಬದಲಾವಣೆ ಇಲ್ಲದೆ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಪರಿಗಣಿಸಲಾಗಿದೆ. ಕರ್ನಾಟಕದ ಕೆ.ಎಲ್ ರಾಹುಲ್ ಅವರು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ.

ಭಾರತ ಟಿ-20 ತಂಡ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್(ವಿ.ಕೀ), ವಾಷಿಂಗ್ಟನ್ ಸುಂದರ್, ಕೃನಾಲ್ ಪಾಂಡ್ಯ, ಯಜುವೇಂದ್ರ ಚಾಹಲ್, ರಾಹುಲ್ ಚಾಹರ್, ದೀಪಕ್ ಚಾಹರ್, ಖಲೀಲ್ ಅಹಮದ್, ಶಿವಂದುಬೆ, ಶಾರ್ದೂಲ್ ಠಾಕೂರ್.

ಭಾರತ ಟೆಸ್ಟ್‌ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ವೃದ್ದಿಮನ್ ಸಾಹ(ವಿ.ಕೀ), ಆರ್. ಜಡೇಜಾ, ಆರ್. ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್

ಬಾಂಗ್ಲಾದೇಶ-ಭಾರತ ಸರಣಿ ವೇಳಾಪಟ್ಟಿ
ಪಂದ್ಯ    ದಿನಾಂಕ ಸ್ಥಳ
ಮೊದಲ ಟಿ-20    ನ.3 ದೆಹಲಿ
ಎರಡನೇ ಟಿ-20    ನ.7 ರಾಜ್‌ಕೋಟ್
ಮೂರನೇ ಟಿ-20    ನಾಗ್ಪುರ್
ಮೊದಲನೇ ಟೆಸ್ಟ್‌    ನ.14 ರಿಂದ 18    ಇಂಧೋರ್
ಎರಡನೇ ಟೆಸ್ಟ್‌    ನ.22 ರಿಂದ 26    ಕೋಲ್ಕತ್ತಾ

SCROLL FOR NEXT