ಕ್ರಿಕೆಟ್

ನನ್ನ ತಂದೆಯೇ ನನಗೆ 'ಸೂಪರ್ ಹೀರೋ': ವಿರಾಟ್ ಕೊಹ್ಲಿ

Raghavendra Adiga

ನವದೆಹಲಿ: ತಮ್ಮ ವೃತ್ತಿ ಜೀವನದಲ್ಲಿ ತಂದೆಯ ಪಾತ್ರ ಬಹು ಮುಖ್ಯವಾದದ್ದು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ವಿಶ‍್ವದ ಖ್ಯಾತ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಶನಿವಾರ 'ಸೂಪರ್ ವಿ' ಎನಿಮೇಟೆಡ್ ಸೀರೀಜ್ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ವಿರಾಟ್, ಅವರ ತಂದೆ ರಿಯಲ್ ಹೀರೋ ಎಂದು ಹೇಳಿದ್ದಾರೆ.

"ನಿಜ ಜೀವನದಲ್ಲಿ ನನ್ನ ತಂದೆ ನನ್ನ ಹೀರೋ. ಇವರು ಮಹತ್ವದ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲು ನೆರವಾಗಿದೆ. ಈ ಜೀವನದಲ್ಲಿ ಇಂದಿಗೂ ಅವರೇ ನನ್ನ ಹೀರೋ. ಹಲವು ಆಟಗಾರರು ನಿಮ್ಮನ್ನು ಪ್ರೇರಣೆ ಮಾಡಬಹುದು. ನಿಮ್ಮ ಮುಂದೆ ನಿಮ್ಮ ಜೀವನದ ನಿಜ ಉದಾಹರಣೆ ನೀಡಿದರೆ ಅದು ವಿಶೇಷವಾಗಿರುತ್ತದೆ" ಎಂದು ತಿಳಿಸಿದ್ದಾರೆ. 

"ಅವರು (ತಂದೆ) ನನ್ನ ಮುಂದೆ ಇಟ್ಟ ಉದಾಹರಣೆಗಳು ... ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಆಡುತ್ತಿದ್ದಾಗ ... ನನ್ನ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಅವರು ತೆಗೆದುಕೊಂಡ ನಿರ್ಧಾರಗಳು. ಅವರು ನನಗೆ ವಿಭಿನ್ನ ಆಯಾಮಗಳ ಬಗ್ಗೆ ಹೇಳಬಹುದಿತ್ತು.ಅವರ ವ್ಯಕ್ತಿತ್ವ ಮತ್ತು ನಿರ್ಧಾರಗಳಿಂದಾಗಿ, ನನ್ನ ಗಮನವು ಯಾವಾಗಲೂ ಒಂದೇ ಕಡೆ ಕೇಂದ್ರೀಕೃತವಾಗಿತ್ತು.  ನಾನು ಕಠಿಣ ಪರಿಶ್ರಮದಿಂದ ಮುಂದುವರಿಯುವೆ ಹೊರತು ಬೇರಾವ ಮಾರ್ಗದಿಂದಲ್ಲ " ಕೊಹ್ಲಿ ಹೇಳಿದ್ದಾರೆ.

ನವೆಂಬರ್ 5ರಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಸ್ಟಾರ್ ಪ್ಲಸ್ ಮತ್ತು ಡಿಸ್ನಿಗಳಲ್ಲಿ ಕೊಹ್ಲಿಯನ್ನು ಆಧರಿಸಿ 'ಸೂಪರ್ ವಿ' ಎಂಬ ಆನಿಮೇಟೆಡ್ ಸರಣಿ ಪ್ರಸಾರವಾಗಲಿದೆ.

" ಅವರು ನನ್ನ ಸೂಪರ್ ಹೀರೋ ಆಗಿದ್ದಾರೆ. ಅವರ ವ್ಯಕ್ತಿತ್ವ ಮತ್ತು ನಿರ್ಧಾರಗಳಿಂದಾಗಿ, ನನ್ನ ವೃತ್ತಿಜೀವನದ ಹಾದಿ ಸರಳವಾಯಿತು, ನಾನು ಕಷ್ಟಪಟ್ಟು ದುಡಿಯುವುದರಿಂದ ಮಾತ್ರ ಮುಂದುವರಿಯಬೇಕಾಗಿತ್ತು. ಆಗ ನಾನು ಸಾಕಷ್ಟು ಒಳ್ಳೆಯವನಾಗಿರಲಿಲ್ಲ .... ಆದರೆ ಅವರ ಕಾರಣದಿಂದ ನಾನಿಂದು ಹೀಗೆ ಬದಲಾಗಿದ್ದೇನೆ. " ತಂದೆಯ ಕುರಿತಂತೆ ಅವರು ಹೇಳಿಕೊಂಡಿದ್ದಾರೆ.

SCROLL FOR NEXT