ವಿಕೆಟ್ ಪಡೆದ ಸಂಭ್ರಮದಲ್ಲಿ ಶಮಿ 
ಕ್ರಿಕೆಟ್

ಭಾರತ ವರ್ಸಸ್ ವೆಸ್ಟ್ ಇಂಡೀಸ್: ಮತ್ತೆ ಸಂಕಷ್ಟದಲ್ಲಿ ವಿಂಡೀಸ್, ಮೊದಲ ಇನ್ನಿಂಗ್ಸ್ ಭಾರಿ ಮುನ್ನಡೆಯತ್ತ ಟೀಂ ಇಂಡಿಯಾ

ಭಾರತದ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಹಿನ್ನಡೆಯತ್ತ ಸಾಗಿದೆ.

ಕೇವಲ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿರುವ ವಿಂಡೀಸ್ ಪಡೆ, ಬುಮ್ರಾ ಗೆ ಆರು ವಿಕೆಟ್

ಜಮೈಕಾ: ಭಾರತದ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಹಿನ್ನಡೆಯತ್ತ ಸಾಗಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ 416 ರನ್ ಗಳನ್ನು ಬೆನ್ನುಹತ್ತಿದೆ ವಿಂಡೀಸ್ ತಂಡ ಜಸ್ ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ತತ್ತರಿಸಿ ಹೋಗಿದ್ದು, ಕೇವಲ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದೆ. ಆರಂಭದಿಂದಲೂ ವಿಂಡೀಸ್ ದಾಂಡಿಗರನ್ನು ಕಾಡಿದ ಬುಮ್ರಾ ವಿಂಡೀಸ್ ದಾಂಡಿಗರು ಪೆಲಿಯನ್ ಪರೇಡ್ ನಡೆಸುವಂತೆ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಹೇಟ್ಮರ್ ಗಳಿಸಿದ 34 ರನ್ ಗಳ ವಿಂಡೀಸ್ ತಂಡದ ವೈಯುಕ್ತಿಕ ಗರಿಷ್ಠ ಮೊತ್ತವಾಗಿದ್ದು, ಇಬ್ಬರು ಆಟಗಾರರು ಶೂನ್ಯಕ್ಕೆ ಔಟ್ ಆದರೆ, ಮೂರು ಮಂದಿ ಆಟಗಾರರು ಎರಡಂಕಿ ಕೂಡ ದಾಟಿಲ್ಲ.

ಕೇವಲ 22 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ವಿಂಡೀಸ್ ಪಡೆಗೆ ಶಮಿ ಆಘಾತ ನೀಡಿದರು. 34 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಹೇಟ್ಮರ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. ಬಳಿಕ ಬುಮ್ರಾ ಬೌಲಿಂಗ್ ನಲ್ಲಿ ಹೋಲ್ಡರ್ ಔಟ್ ಆದರು. ದಿನದಾಟದ ಅಂತ್ಯಕ್ಕೆ ವಿಂಡೀಸ್ ತಂಡ  87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದು, 2 ರನ್ ಗಳಿಸಿರುವ ಹ್ಯಾಮಿಲ್ಟನ್ ಮತ್ತು 4 ರನ್ ಗಳಿಸಿರುವ ಕಾರ್ನ್ ವಾಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇನ್ನು ಭಾರತದ ಬರ ಮಾರಕ ಬೌಲಿಂಗ್ ದಾಳಿ ನಡೆಸಿದ ಬುಮ್ರಾ 6 ವಿಕೆಟ್ ಪಡೆದಿದ್ದು, ಶಮಿ 1 ವಿಕೆಟ್ ಪಡೆದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

'Health camp' ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ಮಹಿಳೆ! ಪೊಲೀಸರಿಗೆ ದೂರು, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಸ್ ದಾಖಲು

ಅಯೋಧ್ಯೆ ಟ್ರಸ್ಟ್ ಸಿಇಒ ಅಧಿಕಾರಗಳನ್ನು ನಿರ್ಧರಿಸುತ್ತದೆ, ಸರ್ಕಾರವಲ್ಲ: ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

ನನ್ನ ಜೊತೆ ಮರ್ಯಾದೆಯಿಂದ ಮಾತಾಡು: ಸ್ವಿಟ್ಜರ್ಲೆಂಡ್ ವಿರುದ್ಧದ ಪಂದ್ಯದ ನಡುವೆ ರೆಫರಿ ವಿರುದ್ಧ ಮೆಸ್ಸಿ ವಾಗ್ವಾದ, Video