ಕ್ರಿಕೆಟ್

ಎರಡು ಹುದ್ದೆ: ಪಾಕ್ ಮಾಜಿ ನಾಯಕ ಮಿಸ್ಬಾ- ಉಲ್ -ಹಕ್ ಕಾಲೆಳೆದ ಅಖ್ತರ್

Nagaraja AB

ಲಾಹೋರ್ : ಪಾಕಿಸ್ತಾನದ ಮುಖ್ಯ ಕೋಚ್ ಹಾಗೂ ಮುಖ್ಯ ಆಯ್ಕೆದಾರರ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವ ಮಾಜಿ ನಾಯಕ ಮಿಸ್ಬಾ- ಉಲ್ -ಹಕ್  ಅವರ ಕಾಲೆಳೆದಿದ್ದಾರೆ  ಮಾಜಿ ವೇಗಿ ಶೋಯಬ್ ಅಖ್ತರ್ 

ಮಿಸ್ಬಾ ಉಲ್ ಹಕ್ ಎರಡು ಪಾತ್ರಗಳನ್ನು ನಿರ್ವಹಿಸುವುದನ್ನು ಪಾಕಿಸ್ತಾನ  ಕ್ರಿಕೆಟ್ ಬೋರ್ಡ್ ಇಂದು ದೃಢಪಡಿಸಿದ್ದು, ಮಾಜಿ ವೇಗಿ ವಾಕರ್ ಯೂನಿಸ್ ಬೌಲಿಂಗ್ ಕೋಚ್ ಆಗಿದ್ದಾರೆ. ಈ ಬೆಳವಣಿಗೆ ನಂತರ ಮಿಸ್ಬಾ ಉಲ್ ಹಕ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಕ ಮಾಡದಿರುವುದು ಆಶ್ಚರ್ಯ ತಂದಿದೆ ಎಂದು ಅಖ್ತರ್ ಹೇಳಿದ್ದಾರೆ.

ಪಾಕಿಸ್ತಾನ ತಂದ ಮುಖ್ಯ ಆಯ್ಕೆದಾರ ಹಾಗೂ ಮುಖ್ಯ ಕೋಚ್ ಆಗಿರುವ ಮಿಸ್ಬಾ ಉಲ್ ಹಕ್ ಅವರಿಗೆ ಅಭಿನಂದನೆಗಳು.  ಅವರನ್ನು ಪಾಕಿಸ್ತಾನದ ಅಧ್ಯಕ್ಷರನ್ನಾಗಿ ನೇಮಕ ಮಾಡದಿರುವುದು ಆಶ್ಚರ್ಯ ತಂದಿದೆ. ಹಹಹಹಹ ಇದು ಕೇವಲ ತಮಾಷೆಗಾಗಿ ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.

2017 ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದ 45 ವರ್ಷದ  ಮಿಸ್ಬಾ ಉಲ್ ಹಕ್ ಅವರನ್ನು ಐವರು ಸದಸ್ಯರನ್ನೊಳಗೊಂಡ ಸಮಿತಿ ಪಾಕಿಸ್ತಾನದ ಮುಖ್ಯ ಕೋಚ್ ಹಾಗೂ ಆಯ್ಕೆದಾರರ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ 

SCROLL FOR NEXT