ಕ್ರಿಕೆಟ್

ಆ್ಯಷಸ್ ಟೆಸ್ಟ್: ಇಂಗ್ಲೆಂಡ್ ಗೆ 185 ರನ್ ಸೋಲು, ಆಸೀಸ್ ಗೆ 2-1 ರಿಂದ ಮುನ್ನಡೆ

Srinivasamurthy VN

ಪ್ರತಿಷ್ಠಿತ ಆ್ಯಷಸ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡ ಆಸ್ಟ್ರೇಲಿಯಾ

ಮ್ಯಾಂಚೆಸ್ಟರ್: ಪ್ರತಿಷ್ಠಿತ ಆ್ಯಷಸ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದ್ದು, ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 185 ರನ್ ಗಳ ಜಯ ಸಾಧಿಸಿದೆ.

ವೇಗಿ ಪ್ಯಾಟ್ ಕಮಿನ್ಸ್ (43ಕ್ಕೆ 4) ಹಾಗೂ ಜೋಶ್ ಹ್ಯಾಜಲ್ ವುಡ್ (31ಕ್ಕೆ 2) ಅವರ ಬಿಗುವಿನ ದಾಳಿಯ ಪರಿಣಾಮ ಆಸ್ಟ್ರೇಲಿಯಾ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 185 ರನ್ ಗಳಿಂದ ಮಣಿಸಿ, ಐದು ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಗೆ 18 ರನ್ ಗಳಿಂದ ಮುಂದುವರಿಸಿ, 197 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ 185 ರನ್ ಗಳ ಸೋಲು ಕಂಡಿತು. ಆರಂಭಿಕ ಬ್ಯಾಟ್ಸ್ ಮನ್ ಜೋಯ್ ಡೆನ್ಲಿ 123 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 53 ರನ್ ಬಾರಿಸಿದರು. ಮೂರನೇ ವಿಕೆಟ್ ಗೆ ಜೇಸನ್ ರಾಯ್ (31) ಹಾಗೂ ಡೆನ್ಲಿ ಜೋಡಿ 66 ರನ್ ಗಳ ಕಾಣಿಕೆ ನೀಡಿತು.

SCROLL FOR NEXT