ಕ್ರಿಕೆಟ್

ತಮಿಳುನಾಡು ಪ್ರೀಮಿಯರ್ ಲೀಗ್(ಟಿಪಿಎಲ್) ಫಿಕ್ಸಿಂಗ್ ಆರೋಪ ತನಿಖೆ ಶುರು

Vishwanath S

ಚೆನ್ನೈ: ನಾಲ್ಕನೇ ಆವೃತ್ತಿ ತಮಿಳುನಾಡು ಪ್ರೀಮಿಯರ್ ಲೀಗ್‌ನ ಆಟಗಾರರು ಅಕ್ರಮವಾಗಿ ಬೇರೆಯವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪದ ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಭ್ರಷ್ಟಾಚಾರ ನಿಗ್ರಹ ಘಟಕವು ತನಿಖೆಯನ್ನು ಆರಂಭಿಸಿದೆ.

ತಮಿಳುನಾಡು ಕ್ರಿಕೆಟ್ ಸಂಘ ಟಿ-20 ಲೀಗ್ ಆಯೋಜಿತ್ತು. ಪಂದ್ಯಾವಳಿಯ ವೇಳೆ ಹಲವು ಜನರು ಫಿಕ್ಸಿಂಗ್‍‍ಗಾಗಿ ಅವರನ್ನು ಸಂಪರ್ಕಿಸಿದ್ದಾಗಿ ಅನೇಕ ಆಟಗಾರರು ದೂರಿದ್ದಾರೆ. ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ಈ ಆರೋಪಗಳ ಬಗ್ಗೆ ತನಿಖೆ ಆರಂಭಿಸಿದೆ. ಎಸಿಯು ಮುಖ್ಯಸ್ಥ ಅಜಿತ್ ಸಿಂಗ್ ಅವರ ಪ್ರಕಾರ, ಜುಲೈ 19 ಮತ್ತು ಆಗಸ್ಟ್ 15 ರ ನಡುವೆ ಎಂಟು ತಂಡಗಳ ನಡುವೆ ಆಡಿದ ಲೀಗ್ ಪಂದ್ಯಗಳಲ್ಲಿ ಆಟಗಾರರನ್ನು ಸಂಪರ್ಕಿಸಲಾಗಿದೆ. ಆಟಗಾರರನ್ನು ಸಂಪರ್ಕಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಸಂಪರ್ಕ ಸಾಧಿಸಲು ಸಂದೇಶಗಳು ಬಂದಿವೆ ಎಂದು ಆಟಗಾರರು ಎಸಿಯುಗೆ ತಿಳಿಸಿದ್ದಾರೆ. ಆದ್ದರಿಂದ ಈ ತನಿಖೆ ಯಾವುದೇ ಆಟಗಾರರ ವಿರುದ್ಧವಲ್ಲ ಎಂದು ಅಜಿತ್ ಹೇಳಿದ್ದಾರೆ.

SCROLL FOR NEXT