ದಿನೇಶ್ ಮೊಂಗಿಯಾ 
ಕ್ರಿಕೆಟ್

ಎಲ್ಲಾ ಮಾದರಿಯ ಕ್ರಿಕೆಟ್ ಗೆ ದಿನೇಶ್ ಮೊಂಗಿಯಾ ವಿದಾಯ

2003 ರ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ಭಾಗವಾಗಿದ್ದ ಮಾಜಿ ಆಲ್‌ರೌಂಡರ್ ದಿನೇಶ್ ಮೊಂಗಿಯಾ ತಾವು ಎಲ್ಲಾ ಸ್ವರೂಪದ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಬುಧವಾರ ಮೊಂಗಿಯಾ ತಾವು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತರಾಗುತ್ತಿರುವುದಾಗಿ ಹೇಳಿದ್ದಾರೆ.

2003 ರ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ಭಾಗವಾಗಿದ್ದ ಮಾಜಿ ಆಲ್‌ರೌಂಡರ್ ದಿನೇಶ್ ಮೊಂಗಿಯಾ ತಾವು ಎಲ್ಲಾ ಸ್ವರೂಪದ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಬುಧವಾರ ಮೊಂಗಿಯಾ ತಾವು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತರಾಗುತ್ತಿರುವುದಾಗಿ ಹೇಳಿದ್ದಾರೆ.

ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಸೇರುವ ಮೊದಲು 2007 ರಲ್ಲಿ ಪಂಜಾಬ್‌ ತಂಡದ ಪರ ಕಡೆಯದಾಗಿ ಮೈದಾನಕ್ಕಿಳಿದಿದ್ದರು. ಆ ನಂತರ ಅವರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಕ್ಕಾಗಿ ಬಿಸಿಸಿಐ ಅವರ ಮೇಲೆ ನಿಷೇಧ ಹೇರಿತ್ತು.

1995-96ರಲ್ಲಿ ಪಂಜಾಬ್ ತಂಡದ ಪರ ಬ್ಯಾಟ್ ಹಿಡಿದು ಕ್ರಿಕೆಟ್ ವೃತ್ತಿ ಬದುಕು ಪ್ರಾರಂಭಿಸಿದ್ದ ಮೊಂಗಿಯಾ 2000-01ರ ಕ್ರೀಡಾಋತುವಿನವರೆಗೆ ದೇಶೀ ಕ್ರಿಕೆಟ್ ನಲ್ಲಿ ಅದ್ಭುತ ಸಾಧಕರಾಗಿ ಹೆಸರಾಗಿದ್ದರು.

ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ ನಡೆದ ಏಕದಿನದಲ್ಲಿ ಮೊಂಗಿಯಾ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.ಮುಂದೆ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಅವರು  2002 ರಲ್ಲಿ ಗುವಾಹಟಿಯಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ  159 ರನ್ ಗಳಿಸಿ ಅದ್ಭುತ ಯಶಸ್ಸಿಗೆ ಕಾರಣವಾಗಿದ್ದರು.

ವಿಶ್ವಕಪ್ ನಲ್ಲಿ 11 ಪಂದ್ಯಗಳಲ್ಲಿ ಭಾಗವಹಿಸಿದ್ದ ಮೊಂಗಿಯಾ ಒಟ್ಟು ಆರು ಪಂದ್ಯಗಳಲ್ಲಿ ಬ್ಯಾಟಿಂಗ್ ಅವಕಾಶ ಪಡೆದಿದ್ದರು. ನೆದರ್ ಲ್ಯಾಂಡ್ ವಿರುದ್ಧ 42 ರನ್ ಗಳಿಸಿದ್ದು ಮೊಂಗಿಯಾ ವೃತ್ತಿಬದುಕಿನಲ್ಲಿ ವಿಶ್ವಕಪ್ ನ ವಿಭಾಗದಲ್ಲಿ ಶ್ರೇಷ್ಠ ಸಾಧನೆಯಾಗಿದೆ.

ಅವರು ಒಟ್ಟು 57 ಏಕದಿನ ಪಂದ್ಯಗಳನ್ನಾಡಿದ್ದ ಮೊಂಗಿಯಾ 27.95 ಸರಾಸರಿಯಲ್ಲಿ 1230 ರನ್ ಗಳಿಸಿದ್ದರು. ಅಲ್ಲದೆ ಏಕದಿನದಲ್ಲಿ ಒಂದು ಶತಕ ನಾಲ್ಕು ಅರ್ಧಶತಕ ಸಿಡಿಸಿದ್ದ ಇವರು 14 ವಿಕೆಟ್ ಕಿತ್ತು ಸಾಧನೆ ಮಾಡಿದ್ದಾರೆ. ವೃತ್ತಿ ಬದುಕಿನಲ್ಲಿ ಒಂದೂ ಟೆಸ್ಟ್ ಪಂದ್ಯವನ್ನಾಡಿರಲಿಲ್ಲ.ಒಟ್ಟು 121 ಪ್ರಥಮ ದರ್ಜೆ ಪಂದ್ಯಗಳಲ್ಲಿ  21 ಶತಕಗಳನ್ನು ಸಿಡಿಸಿದ್ದರು. ಅಲ್ಲದೆ ಮೊಂಗಿಯಾ ಲಂಕಾಷೈರ್ ಮತ್ತು ಲೀಸೆಸ್ಟರ್ಶೈರ್ ತಂಡದ ಪರ ಆಟವಾಡಿದ್ದರು.

ಐಸಿಎಲ್ ಆಡಿದ್ದ ಮೊಂಗಿಯಾವನ್ನು ಬಿಸಿಸಿಐ ಯಾವುದೇ ಅಧಿಕೃತ ಕಾರಣಗಳಿಲ್ಲದೆ ಶಿಕ್ಷಿಸಿ ಕೈಬಿಟ್ಟಿರು.ಆದರೆ ಮೊಂಗಿಯಾ ಹೊರತು ಐಸಿಎಲ್‌ನೊಂದಿಗಿನ ಒಡನಾಟ ಇರಿಸಿಕೊಂಡಿದ್ದ ಹೆಚ್ಚಿನ ಆಟಗಾರರಿಗೆ ಮಂಡಳಿ ಕ್ಷಮಾದಾನ ನಿಡಿತ್ತೆನ್ನುವುದು ಇಲ್ಲಿ ಗಮನಾರ್ಹ.ಆದರೆ ಹಾಗೆ ಕ್ಷಮಾದಾನ ಸಿಕ್ಕದೆ ಉಳಿದ ಏಕೈಕ ಆಟಗಾರರಾಗಿ ಮೊಂಗಿಯಾ ಉಳಿದುಕೊಂಡಿದ್ದರು.ಅಲ್ಲದೆ ಅವರನ್ನು ಅಧಿಕೃತ ಸರಣಿಗಳಿಂದ ಶಾಶ್ವತವಾಗಿ ಹೊರಗಿರಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT