ಕ್ರಿಕೆಟ್

ಕೊಹ್ಲಿ ನಾಯಕತ್ವದಿಂದ ಆರ್‌ಸಿಬಿಗೆ ಮುಕ್ತಿ ಸಿಗುತ್ತಾ? ನೂತನ ಟೀಂ ನಿರ್ದೇಶಕ ಹೇಸನ್ ಹೇಳೋದೇನು?

Vishwanath S

ಬೆಂಗಳೂರು: ಈ ಸಲ ಕಪ್ ನಮ್ದೆ, ಮುಂದಿನ ಸಲ ಕಪ್ ನಮ್ದೆ ಅಂತಾ ಅಭಿಮಾನಿಗಳು ಕನಸು ಕಾಣುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಏಳು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. 

ಈ ಮಧ್ಯೆ ವಿರಾಟ್ ಕೊಹ್ಲಿಯ ನಾಯಕತ್ವದ ಬಗ್ಗೆ ಅಪಸ್ವರ ಎದ್ದಿತ್ತು. ಈ ಮಧ್ಯೆ ತಂಡದ ನೂತನ ಟೀಂ ನಿರ್ದೇಶಕ ಮೈಕ್ ಹೇಸನ್ ಮಾತನಾಡಿದ್ದು ಯಾವುದೇ ಕಾರಣಕ್ಕೂ ನಾಯಕತ್ವದ ಬದಲಾಣೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಆರ್‌ಸಿಬಿ ತಂಡದಲ್ಲಿ ಘಟಾನುಘಟಿ ಬ್ಯಾಟ್ಸ್ ಮನ್ ಗಳಿದ್ದರೂ ದುರಾದೃಷ್ಟ ಒಂದೇ ಒಂದು ಬಾರಿ ಸಹ ಕಪ್ ಗೆಲ್ಲುವಲ್ಲಿ ತಂಡ ವಿಫಲವಾಗಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಯ್ಲ್ ಆರ್‌ಸಿಬಿಯಲ್ಲಿ ಆಡಿದ್ದರು. ಆದರೆ ಯಾವುದು ಕೈಗೂಡಿರಲಿಲ್ಲ.

ಒಂದೆಡೆ ಟ್ರೋಫಿ ಸೋಲಿನ ಹತಾಶೆಯಾದರೆ ಮತ್ತೊಂದೆಡೆ ತಂಡದ ಬಲ ಹೆಚ್ಚಿಸುವುದರ ಕುರಿತಾಗಿ ಹೇಸನ್ ಹೇಳಿಕೊಂಡಿದ್ದಾರೆ. ಹಲವು ಆಯ್ಕೆಗಳ ಹೊರತಾಗಿ ನಾವು ನಾಯಕತ್ವದ ಬದಲಾವಣೆ ಕುರಿತು ಚಿಂತಿಸುವುದನ್ನು ಬಿಟ್ಟಿದ್ದೇವೆ. ಕೆಲ ನಿರ್ದಿಷ್ಟ ಆಟಗಾರರನ್ನು ತೆಗೆದುಕೊಳ್ಳುವುದಕ್ಕೆ ಹೆಚ್ಚಿನ ಗಮನ ನೀಡಿವುದಾಗಿ ಹೇಳಿದ್ದಾರೆ.

SCROLL FOR NEXT