ಕ್ರಿಕೆಟ್

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್; ಬೆಳಗಾವಿ ತಂಡದ ಮಾಲೀಕ ಸಿಸಿಬಿ ವಶಕ್ಕೆ

Raghavendra Adiga

ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬೆಳಗಾವಿ ಪ್ಯಾಂಥರ್ಸ್​ ತಂಡ ಮಾಲೀಕ ಅಲಿ ಅಸ್ಫಾಕ್​ ಅವರನ್ನು ಸಿಸಿಬಿ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಅಲಿ ಅಸ್ಫಾಕ್ ಮುಂಬೈನ ಬುಕ್ಕಿಗಳೊಡನೆ ಸಂಪರ್ಕದಲ್ಲಿದ್ದನೆಂದು ಗಮನಿಸಿದ ಪೋಲೀಸರು ಆತ ಕೆಪಿಎಲ್, ಐಸಿಎಲ್ ಹಾಗೂ ಅಂತರಾಷ್ಟ್ರೀಯ ಪಂದ್ಯಗಳನ್ನು ಫಿಕ್ಸ್ ಮಾಡುತ್ತಿದ್ದ ಎಂದಿದ್ದಾರೆ.

ಖಚಿತ ಮಾಹಿತಿ ಆಧಾರದಲ್ಲಿ ಅಲಿಯನ್ನು ವಶಕ್ಕೆ ಪಡೆದಿದ್ದು ಇನ್ನು ಕೆಲ ಆಟಗಾರರು ಹಾಗೂ ಉ:ಳಿದವರ ಬಗೆಗೆ ಸಹ ವಿಚಾರಣೆ ವೇಳೆ ಮಾಹಿತಿ ಬಹಿರಂಗವಾಗಲಿದೆ ಎನ್ನಲಾಗಿದೆ.

ತಮಿಳುನಾಡು  ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅಪರಿಚಿತರು ಪ್ರಮುಖ ಆಟಗಾರರ ಮೊಬೈಲ್​ಗೆ ವಾಟ್ಸಪ್ ಸಂದೇಶ ಕಳಿಸಿದ ಕುರಿತಂತೆ ಬಿಸಿಸಿಐ ತನಿಖೆ ಪ್ರಾರಂಭಿಸಿದ ಬೆನ್ನಲ್ಲಿ ಮಹಿಳಾ ತಂಡದ ಆಟಗಾರ್ತಿಯೊಬ್ಬರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಸಿಕ್ಕುಬಿದ್ದದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಕರ್ನಾಟಕ ಪ್ರೀಮಿಯರ್ ಲೀಗ್ - ಕೆಪಿಎಲ್ ನಲ್ಲಿ ಸಹ ಫಿಕ್ಸಿಂಗ್ ನಡೆದಿದೆ ಎಂದು ಬಿಸಿಸಿಐಗೆ ಸುಳಿವು ಸಿಕ್ಕಿದ್ದು ಈ ಸಂಬಂಧ ಮಂಡಳಿ ಎರಡು ಡು ಕೆಪಿಎಲ್​ ತಂಡಗಳ ಮೇಲೆ ತನಿಖೆ ಕೈಗೊಂಡಿದೆ.

SCROLL FOR NEXT