ಕ್ರಿಕೆಟ್

ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಜರುದ್ದೀನ್ ಆಯ್ಕೆ

Nagaraja AB

ಹೈದ್ರಾಬಾದ್ : ಕ್ರಿಕೆಟ್ ವೃತ್ತಿಜೀವನದ ಸುಮಾರು ಎರಡು ದಶಕಗಳ ಬಳಿಕ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್  ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಗೆ ನಿನ್ನೆ ನಡೆದ ಚುನಾವಣೆಯಲ್ಲಿ ಅಜರುದ್ದೀನ್ ಅವರ ಬಣ ಎಲ್ಲಾ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ  ಅಜರುದ್ದೀನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜೀವನದ ಹಾವು-ಏಣಿ ಆಟದಲ್ಲಿ ಮಾಜಿ ಬ್ಯಾಟ್ಸ್ ಮನ್, 2017ರಲ್ಲಿ  ನಡೆದಿದ್ದ ಚುನಾವಣೆಗಾಗಿ ಅಜರುದ್ದೀನ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿತ್ತು. 

ಕ್ರಿಕೆಟ್ ಆಡುವಾಗ ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷನಾಗುತ್ತೇನೆ ಅಂದುಕೊಂಡಿರಲಿಲ್ಲ. ಅದು ಅತ್ಯಂತ ಹರ್ಷದಾಯಕವಾಗಿದೆ. ತಮ್ಮ ಬಣದ ಎಲ್ಲರೂ ಆಯ್ಕೆಯಾಗಿರುವುದರಿಂದ ಮಹತ್ವದ ನಿರ್ಧಾರ ಕೈಗೊಳ್ಳುವಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಲು ನೆರವಾಗಿದೆ ಎಂದು ಚುನಾವಣಾಧಿಕಾರಿ ವಿ.ಎಸ್. ಸಂಪತ್ ಫಲಿತಾಂಶ ಪ್ರಕಟಿಸಿದ ಬಳಿಕ ಮೊಹಮ್ಮದ್ ಅಜರುದ್ದೀನ್ ಹೇಳಿದರು. 

ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ನಿಧಿಯ ತೀವ್ರ ಕೊರತೆ ಕಾಡುತ್ತಿದ್ದು, ಪ್ರತಿಭಾವಂತ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಕಳುಹಿಸುವಲ್ಲಿ ವಿಫಲವಾಗಿದೆ. ಮೊಹಮ್ಮದ್ ಶಿರಾಜ್, ಅಂಬಟ್ಟಿ ರಾಯುಡು ಹೊರತುಪಡಿಸಿದಂತೆ ಬೇರೆ ಯಾವ ಆಟಗಾರರು ರಾಷ್ಟ್ರೀಯ ಆಟಗಾರರ ಡ್ರೆಸ್ಸಿಂಗ್ ರೂಮ್ ಪ್ರವೇಶಿಸಲು ಸಾಧ್ಯವಾಗಿಲ್ಲ.

ಇಂತಹ ಸಂದರ್ಭದಲ್ಲಿ ಮೊಹಮ್ಮದ್ ಅಜರುದ್ದೀನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್  ಬೆಳವಣಿಗೆಯಲ್ಲಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ಗಾರೆ ಎಂಬುದನ್ನು ಕಾದು ನೋಡಬೇಕಾಗಿದೆ. 

SCROLL FOR NEXT