ಕ್ರಿಕೆಟ್

ಡಕ್ವರ್ತ್ ಲೂಯಿಸ್ ಸಿದ್ದಪಡಿಸಿದ ಟೋನಿ ಲೂಯಿಸ್ ನಿಧನ

Raghavendra Adiga

ದುಬೈ: ಮ್ಯಾಥಮೆಟಿಷನ್ ಟೋನಿ ಲೂಯಿಸ್ ಅವರ ನಿಧನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗುರುವಾರ ತೀವ್ರ ಸಂತಾಪ ಸೂಚಿಸಿದೆ. 

ಮಳೆ ಬಾಧಿತ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಗುರಿ ನೀಡಲಾಗುವ ಮೊತ್ತವನ್ನು ಲೆಕ್ಕಾಚಾರ ಮಾಡುವ ಡಕ್ವರ್ತ್-ಲೂಯಿಸ್- ಸ್ಟರ್ನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದವರಲ್ಲಿ ಟೋನಿ ಲೂಯಿಸ್ ಸಹ ಒಬ್ಬರಾಗಿದ್ದರು.

"ಟೋನಿ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪರಿಷ್ಕೃತ ಗುರಿ ನೀಡುವ ಇಂದಿನ ವ್ಯವಸ್ಥೆಯು ಎರಡು ದಶಕಗಳ ಹಿಂದೆ ಟೋನಿ ಮತ್ತು ಫ್ರಾಂಕ್ ಅಭಿವೃದ್ಧಿಪಡಿಸಿದ ವ್ಯವಸ್ಥೆಯನ್ನು ಆಧರಿಸಿದೆ,'' ಎಂದು ಕ್ರಿಕೆಟ್‌ನ ಐಸಿಸಿ ಜನರಲ್ ಮ್ಯಾನೇಜರ್ ಜೆಫ್ ಅಲಾರ್ಡಿಸ್ ಹೇಳಿದ್ದಾರೆ.

ಕ್ರಿಕೆಟ್ ಆಟಕ್ಕೆ ಅವರು ನೀಡಿದ ಕೊಡುಗೆಯು ಮುಂಬರುವ ವರ್ಷಗಳಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ ಮತ್ತು ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಸಂತಾಪವನ್ನು ಸೂಚಿಸುತ್ತೇವೆ, ಎಂದು ಅವರು ಹೇಳಿದ್ದಾರೆ.

78 ವರ್ಷದ ಲೂಯಿಸ್ ಬುಧವಾರ ನಿಧನರಾಗಿದ್ದಾರೆ. ಪ್ರಸ್ತುತ ಕ್ರಿಕೆಟ್ ನಲ್ಲಿ ಬಳಕೆಯಲ್ಲಿರುವ ಡಕ್ವರ್ತ್ ಲೂಯಿಸ್ ನಿಯಮವನ್ನು ಟೋನಿ ಲೂಯಿಸ್ ಮತ್ತು ಫ್ರಾಂಕ್ ಡಕ್ವರ್ತ್ ಜಂಟಿಯಾಗಿ ಅಭಿವೃದ್ಧಿ ಪಡಿಸಿದ್ದರು. ಇವರಿಬ್ಬರು ಅಭಿವೃದ್ಧಿಪಡಿಸಿದ ನಿಯಮವನ್ನು 1999ರಲ್ಲಿ ಐಸಿಸಿ ಅಳವಡಿಸಿಕೊಂ

SCROLL FOR NEXT