ಕ್ರಿಕೆಟ್

ಸ್ಪಾಟ್ ಫಿಕ್ಸರ್ ಗಳನ್ನು ಗಲ್ಲಿಗೇರಿಸಬೇಕು: ಜಾವೇದ್‌ ಮಿಯಾಂದಾದ್‌ 

Shilpa D

ಕರಾಚಿ: ಕ್ರಿಕೆಟ್‌ ಆಟದಲ್ಲಿ ಮೋಸದಾಟವಾಡಿ ದೇಶಕ್ಕೆ ಕಳಂಕ ತಂದ ಕ್ರಿಕೆಟಿಗರ ವಿರುದ್ಧದ ಆರೋಪ ಸಾಬೀತಾದರೆ ಅವರನ್ನು ಗಲ್ಲಿಗೇರಿಸಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೇದ್‌ ಮಿಯಾಂದಾದ್‌ ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ಮಿಯಾಂದಾದ್, ಮ್ಯಾಚ್‌ ಫಿಕ್ಸಿಂಗ್ ಅಥವಾ ಯಾವುದೇ ರೀತಿಯ ಮೋಸದ ಆಟದಲ್ಲಿ ತೊಡಗಿಸಿಕೊಂಡು ತಂಡಕ್ಕೆ ಮತ್ತು ದೇಶಕ್ಕೆ ದ್ರೋಹ ಬಗೆಯುವವರ ವಿರುದ್ಧ ತಮಗೆ ಯಾವುದೇ ಅನುಕಂಪವಿಲ್ಲ ಎಂದು ಹೇಳಿದ್ದಾರೆ.

"ಸ್ಪಾಟ್‌ ಫಿಕ್ಸಿಂಗ್‌ ನಂತಹ ಕೆಲಸದಲ್ಲಿ ತೊಡಗುವ ಆಟಗಾರರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು. ಸ್ಪಾಟ್‌ ಫಿಕ್ಸಿಂಗ್‌ ಮಾಡುವವರನ್ನು ನೇಣಿಗೆ ಏರಿಸಬೇಕು. ಏಕೆಂದರೆ ಅದು ಕೊಲೆ ಮಾಡಿದಕ್ಕೆ ಸಮನಾದ ಅಪರಾದವಾಗಿದೆ. ಹೀಗಾಗಿ ಶಿಕ್ಷೆಯೂ ಅಷ್ಟೇ ಕಠೋರವಾಗಿರಬೇಕು. ಇಂತಹ ಕೆಲಸ ಮಾಡುವವರಿಗೆ ಇದೇ ಶಿಕ್ಷೆ ಎಂದು ಇತರರಿಗೆ ಮಾದರಿ ನೀಡಬೇಕು. ನಂತರ ಈ ರೀತಿ ಆಲೋಚನೆ ಮಾಡುವುದಕ್ಕೂ ಮೊದಲು ಆಟಗಾರರು ಯೋಚಿಸುತ್ತಾರೆ," ಎಂದಿದ್ದಾರೆ.

SCROLL FOR NEXT