ಕ್ರಿಕೆಟ್

ಈ ಬಾರಿ ಕೊಹ್ಲಿ ಕೈತಪ್ಪಿದ ವಿಸ್ಡನ್ ಗೌರವ, ಬೆನ್ ಸ್ಟೋಕ್ಸ್ ಗೆ ಒಲಿದ ಪ್ರಶಸ್ತಿ!

Vishwanath S

ಲಂಡನ್: ಕಳೆದ ವರ್ಷ ಇಂಗ್ಲೆಂಡ್ ತಂಡ ಏಕದಿನ ವಿಶ್ವ ಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದ ಬೆನ್ ಸ್ಟೋಕ್ಸ್ ವಿಶ್ವದ ವಿಸ್ಡನ್ ಮುಂಚೂಣಿ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ತಮ್ಮಲ್ಲಿ ಉಳಿಸಿಕೊಂಡಿದ್ದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಧಿಪತ್ಯವನ್ನು ಕೊನೆಗೊಳಿಸಿದ್ದಾರೆ.

2020ರ ವಿಸ್ಡನ್ ಕ್ರಿಕೆಟರ್ಸ್ ಅಲ್ಮಾರ್ಕ್, ಅತ್ಯಾದ್ಭುತ ಆಲ್ ರೌಂಡರ್ ಗೆ ಕಿರೀಟ ನೀಡಿ ಗೌರವಿಸಿದೆ.  2005ರಲ್ಲಿ ಆ್ಯಂಡ್ರೂ ಫ್ಲಿಂಟಾಫ್  ನಂತರ ಈ ಪ್ರಶಸ್ತಿಗೆ ಭಾಜನರಾದ ಮೊದಲ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್.
ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಕಪ್ ಫೈನಲ್  ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಇಂಗ್ಲೆಂಡ್ ತಂಡ, ಚೊಚ್ಚಲ ಬಾರಿ  ಏಕದಿನ ಟ್ರೋಫಿಗೆ ಮುತ್ತಿಟ್ಟಿತ್ತು. 

ಆಲ್ ರೌಂಡ್ ಪ್ರದರ್ಶನ ನೀಡಿದ 28 ವರ್ಷದ ಸ್ಟೋಕ್ಸ್, ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಆ್ಯಶಸ್ ಟೆಸ್ಟ್ ನಲ್ಲಿಯೂ ಅಜೇಯ 135 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

SCROLL FOR NEXT