ರಿಕಿ ಪಾಂಟಿಂಗ್ 
ಕ್ರಿಕೆಟ್

ವೃತ್ತಿ ಬದುಕಿನಲ್ಲಿ ಎದುರಿಸಿದ ಕಠಿಣ ಓವರ್‌ ಬಗ್ಗೆ ತಿಳಿಸಿದ ರಿಕಿ ಪಾಂಟಿಂಗ್

ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಕಷ್ಟದ ಓವರ್‌ ಕುರಿತಾಗಿ ಹೇಳಿಕೊಂಡಿದ್ದಾರೆ.

ನವದೆಹಲಿ: ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಕಷ್ಟದ ಓವರ್‌ ಕುರಿತಾಗಿ ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೆ ಎರಡು ಬಾರಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದು ಕೊಟ್ಟ ಯಶಸ್ವಿ ನಾಯಕ ಪಂಟರ್‌, 2005ರಲ್ಲಿ ನಡೆದ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್‌ ಆಂಡ್ರ್ಯೂ ಫ್ಲಿಂಟಾಫ್‌ ಎದುರು ತಮ್ಮ ವೃತ್ತಿ ಜೀವನದ ಅತ್ಯಂತ ಕಠಿಣ ಓವರ್‌ ಎದುರಿಸಿದ್ದಾಗಿ ಹೇಳಿದ್ದಾರೆ.

ಅಂದು ಆ ಪಂದ್ಯದಲ್ಲಿ ಫ್ಲಿಂಟಾಫ್‌ ಅದ್ಭುತ ರಿವರ್ಸ್‌ ಸ್ವಿಂಗ್‌ ಬೌಲಿಂಗ್‌ ಮೂಲಕ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾ ಎದುರು 2 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಆ ಪಂದ್ಯದಲ್ಲಿ ರಿಕಿ ಪಾಂಟಿಂಗ್‌ ಅವರನ್ನು ಫ್ಲಿಂಟಾಫ್‌ ಔಟ್‌ ಮಾಡಿದ ಅದ್ಭುತ ಓವರ್‌ನ ವಿಡಿಯೋ ತುಣುಕನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಸಂಸ್ಥೆ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ.

ಇದಕ್ಕೆ ಉತ್ತರ ನೀಡಿದ ರಿಕಿ ಪಾಂಟಿಂಗ್‌ ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಕಷ್ಟದ ಓವರ್‌ ಅದು. ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡು ಬರುತ್ತಿತ್ತು. ಅದು ಅದ್ಭುತ ರಿವರ್ಸ್‌ ಸ್ವಿಂಗ್‌ ಬೌಲಿಂಗ್‌ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾವುದೇ ಕ್ಷಣದಲ್ಲಿ ಅಮೆರಿಕದಿಂದ ವೈಮಾನಿಕ ದಾಳಿ ಸಾಧ್ಯತೆ: ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

Ranji Trophy final: ಚೊಚ್ಚಲ ಬಾರಿ ಫೈನಲ್‌ಗೆ ಕಾಲಿಟ್ಟಿರುವ ಕಾಶ್ಮೀರ ಬಲಿಷ್ಠ ಕರ್ನಾಟಕದ ವಿರುದ್ಧ ಗೆಲ್ಲಲು ಪವಾಡವೇ ಮಾಡಬೇಕಿದೆ!

ಬಾಂಗ್ಲಾದೇಶ ಮುಳುಗಿಸುವ ಯೋಜನೆ, ಅಸ್ಥಿರತೆ ಸೃಷ್ಟಿಗೆ ಯತ್ನಿಸಿದ್ದ ನೊಬೆಲ್ ಯೂನಸ್: ಅಧ್ಯಕ್ಷರಿಂದ ಸ್ಫೋಟಕ ಮಾಹಿತಿ ಬಹಿರಂಗ!

2026ರಲ್ಲಿ ಭಾರತದ ವೇತನ ಹೆಚ್ಚಳ ಶೇ.9.1ಕ್ಕೆ ಏರಿಕೆ ಸಾಧ್ಯತೆ: ವರದಿ

ಸ್ಟಾಲಿನ್ ನಿಜವಾದ ಸ್ನೇಹಿತರು ಭ್ರಷ್ಟರು: ಡಿಎಂಕೆ ವಿರುದ್ಧ ನಟ ವಿಜಯ್ ವಾಗ್ದಾಳಿ

SCROLL FOR NEXT