ಎಂಎಸ್ ಧೋನಿ ಸಾರ್ವಕಾಲಿನ ಅತ್ಯದ್ಭುತ ಗೇಮ್ ಫಿನಿಷರ್ ಏಕೆ ಎಂಬುದನ್ನು ಸ್ವತಃ ಓರ್ವ ಅದ್ಭುತ ಗೇಮ್ ಫಿನಿಷರ್ ಆದ ಮೈಕಲ್ ಹಸ್ಸಿ ಬಹಿರಂಗಪಡಿಸಿದ್ದಾರೆ.
ನಂಬಲು ಸಾಧ್ಯವಾಗದ ರೀತಿಯ ಅದ್ಭುತ ಶಕ್ತಿ, ಅತ್ಯಂತ ಹೆಚ್ಚು ಆತ್ಮವಿಶ್ವಾಸ ಧೋನಿಯವರಲ್ಲಿದ್ದು, ಇದೇ ಧೋನಿ ಅವರನ್ನು ಸಾರ್ವಕಾಲಿಕ ಬೆಸ್ಟ್ ಫಿನಿಷರ್ ಆಗುವಂತೆ ಮಾಡಿದೆ ಎಂದು ಮೈಕಲ್ ಹಸ್ಸಿ ಹೇಳ್ದಿದಾರೆ.
ಕ್ರಿಕೆಟ್ ಜಗತ್ತು ಈವರೆಗೂ ಸೃಷ್ಟಿಸಿರುವ ಅದ್ಭುತ ಫಿನಿಷರ್ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ನಡೆಸಿರುವ ವಿಡಿಯೋ ಸಂದರ್ಶನದಲ್ಲಿ ಸಂಜಯ್ ಮಂಜ್ರೇಕರ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಧೋನಿ ತಾಳ್ಮೆ ಕಾಯ್ದುಕೊಂಡು ಎದುರಾಳಿ ತಂಡದ ನಾಯಕ ತಪ್ಪನ್ನು ಎದುರು ನೋಡುತ್ತಾರೆ. ಧೋನಿ ಅವರಲ್ಲಿ ಆ ಅದ್ಭುತ ಶಕ್ತಿಯಿದೆ. ಅಗತ್ಯವಿದ್ದಾಗ ದೊಡ್ಡ ಹೊಡೆತಗಳನ್ನು ಆಡುವ ಆತ್ಮವಿಶ್ವಾಸ ಅವರಲ್ಲಿದೆ. ಅವರಲ್ಲಿ ಅಂಥದ್ದೊಂದು ಆತ್ಮವಿಶ್ವಾಸವೂ ಇದೆ. ನಿಜ ಹೇಳಬೇಕೆಂದರೆ ನನಗೂ ಕೂಡ ಆ ಪ್ರಮಾಣದ ಆತ್ಮವಿಶ್ವಾಸ ಇರಲಿಲ್ಲ," ಎಂದು ಆಸ್ಟ್ರೇಲಿಯಾದ ಬೆಸ್ಟ್ ಫಿನಿಷರ್ ಧೋನಿಯ ಗುಣಗಾನ ಮಾಡಿದ್ದಾರೆ.
ಒಂದು ಓವರ್ ನಲ್ಲಿ 12-13 ರನ್ ಗಳು ಹೋಗದಂತೆ ನೋಡಿಕೊಳ್ಳಬೇಕು ನಾನು ಇದನ್ನು ಕಲಿತಿದ್ದು ಧೋನಿಯಿಂದ, ಅಂತ್ಯದಲ್ಲಿ ಯಾರು ಒತ್ತಡ ಎದುರಿಸುವುದಿಲ್ಲವೋ ಅವರಿಗೆ ಗೆಲ್ಲುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ಧೋನಿ ತಾಳ್ಮೆಯಿಂದ ಪಂದ್ಯವನ್ನು ಸಾಧ್ಯವಾದಷ್ಟೂ ಎಳೆಯುತ್ತಾರೆ. ಶ್ರೇಷ್ಠ ಆಟಗಾರರು ಮಾತ್ರವೇ ಈ ರೀತಿ ಯೋಚಿಸುತ್ತಾರೆ ಎಂದು ಹಸ್ಸಿ ಧೋನಿಯನ್ನು ಹಾಡಿ ಹೊಗಳಿದ್ದಾರೆ.