ಕ್ರಿಕೆಟ್

ಆಟಗಾರರನ್ನು ಚಾರ್ಟೆಡ್ ಫ್ಲೈಟ್ ನಲ್ಲಿ ಕರೆತನ್ನಿ, ಕೋವಿಡ್ ಪರೀಕ್ಷೆ ನಡೆಸಿ, ಆದರೆ ಟಿ20 ವಿಶ್ವಕಪ್ ರದ್ದು ಮಾಡಬೇಡಿ: ಬ್ರಾಡ್ ಹಾಗ್

Vishwanath S

ಮೆಲ್ಬೋರ್ನ್: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಕ್ರಿಕೆಟ್ ಸರಣಿಗಳು ಸ್ಥಗಿತಗೊಂಡಿವೆ. ಈ ನಡುವೆ ಮುಂದಿನ ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿ ಮೇಲೆ ಕಾರ್ಮೋಡ ಆವರಿಸಿದ್ದು ಯಾವುದೇ ಕಾರಣಕ್ಕೂ ಸರಣಿಯನ್ನು ರದ್ದು ಮಾಡಬೇಡಿ ಎಂದು ಮಾಜಿ ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರಾಡ್ ಹಾಗ್ ಹೇಳಿದ್ದಾರೆ. 

ಟೂರ್ನಿಗೂ ಮೊದಲೇ ಆಟಗಾರರನ್ನು ಚಾರ್ಟೆಡ್ ಫ್ಲೈಟ್ ನಲ್ಲಿ ಕರೆತನ್ನಿ, ಅವರಿಗೆ ಕೊರೋನಾ ಪರೀಕ್ಷೆಗಳನ್ನು ನಡೆಸಿ ಆದರೆ ಟೂರ್ನಿಯನ್ನು ಮಾತ್ರ ರದ್ದು ಮಾಡಬೇಡಿ ಎಂದು ಬ್ರಾಡ್ ಹಾಗ್ ಮನವಿ ಮಾಡಿದ್ದಾರೆ. 

ಮಹಾಮಾರಿ ಕೊರೋನಾ ವೈರಸ್ ನಿಂದಾಗಿದ ಜಗತ್ತಿನಾದ್ಯಂತ 1,26,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನ್ನು ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದ್ದು ಜಗತ್ತೆ ಒಂದು ರೀತಿಯಲ್ಲಿ ಲಾಕ್ ಡೌನ್ ಪರಿಸ್ಥಿತಿ ಎದುರಿಸುತ್ತಿದೆ. 

ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ಸರಣಿ ನಡೆಯಬೇಕಿತ್ತು. ಆದರೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಟೂರ್ನಿ ನಡೆಯುವುದು ಡೌಟ್ ಆಗಿದೆ.

SCROLL FOR NEXT