ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಮಹಿಳೆಯರ ಐಪಿಎಲ್ ನಡೆಸುತ್ತೇವೆ. ಇದರಲ್ಲಿ ಅನುಮಾನವೇ ಬೇಡ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಪುರುಷರ ಐಪಿಲ್ ಕ್ರಿಕೆಟ್ ಲೀಗ್ ನಂತೆಯೇ ಮಹಿಳಾ ಐಪಿಎಲ್ ಟೂರ್ನಿಯನ್ನೂ ಕೂಡ ಆಯೋಜನೆ ಮಾಡುತ್ತೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಸೌರವ್ ಗಂಗೂಲಿ
Srinivasa Murthy VN
Updated On : 2 Aug 2020, 4:04 pm

ನವದೆಹಲಿ: ಪುರುಷರ ಐಪಿಲ್ ಕ್ರಿಕೆಟ್ ಲೀಗ್ ನಂತೆಯೇ ಮಹಿಳಾ ಐಪಿಎಲ್ ಟೂರ್ನಿಯನ್ನೂ ಕೂಡ ಆಯೋಜನೆ ಮಾಡುತ್ತೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಭಾನುವಾರ ಈ ಬಗ್ಗೆ ಮಾತನಾಡಿದ ಅವರು ಮಹಿಳಾ ಐಪಿಎಲ್ ಅಥವಾ ಅದೇ ರೀತಿಯ ಚಾಲೆಂಜರ್ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧವಾಗಿದೆ. ಈ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ. ಈ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಶೀಘ್ರದಲ್ಲೇ ಮಹಿಳಾ ಐಪಿಎಲ್ ಟೂರ್ನಿಯ ಕುರಿತು ವೇಳಾಪಟ್ಟಿ ಯೋಜಿಸುತ್ತೇವೆ ಎಂದು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಗಂಗೂಲಿ ಹೇಳಿದ್ದಾರೆ.

ಮೂಲಗಳ ಪ್ರಕಾರ ಮಹಿಳಾ ಐಪಿಎಲ್ ಟೂರ್ನಿಯನ್ನು ನವೆಂಬರ್ 1-10 ಅವಧಿಯಲ್ಲಿ ಆಯೋಜಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ಮನೆಯಲ್ಲಿರುವ ಆಟಗಾರ್ತಿಯರಿಗೆ ತರಬೇತಿ ಕ್ಯಾಂಪ್ ಆಯೋಜಿಸುವ ಕುರಿತೂ ಕೂಡ ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ. ಈ ವರೆಗೂ ನಮ್ಮ ಯಾವುದೇ ಕ್ರಿಕೆಟಿಗರೂ ಸೋಂಕಿಗೆ ತುತ್ತಾಗಿಲ್ಲ. ಅಂತೆಯೇ ಪುರುಷ ಕ್ರಿಕೆಟಿಗರಿಗರಾಗಲಿ, ಮಹಿಳಾ ಆಟಗಾರ್ತಿಯರಾಗಿರಲಿ ಆಟಗಾರರ ಸುರಕ್ಷತೆ ಮುಖ್ಯ ಎಂದು ಗಂಗೂಲಿ ಹೇಳಿದ್ದಾರೆ ಎನ್ನಲಾಗಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement