ಕ್ರಿಕೆಟ್

ನಿವೃತ್ತಿ ನಂತರ ಎಂ ಎಸ್ ಧೋನಿ ಏನು ಮಾಡುತ್ತಾರೆ?ಸಾವಯವ ಗೊಬ್ಬರ ಉದ್ಯಮ ಬಗ್ಗೆ ರಾಂಚಿ ನಾಯಕನ ಒಲವು 

Sumana Upadhyaya

ಚೆನ್ನೈ: ಎಲ್ಲಾ ವಿಧದ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.ಧೋನಿಯವರು ಮುಂದಿನ ದಿನಗಳಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಕೈಯಾಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಚೆನ್ನೈ ಸೂಪರ್ ಕಿಂಗ್ಸ್ ಪರ ಆಟ ಮುಂದುವರಿಸಲಿರುವ ಎಂ ಎಸ್ ಧೋನಿ ಜಾಹೀರಾತು ಕ್ಷೇತ್ರ, ಪ್ರಚಾರ ಕ್ಷೇತ್ರದ ರಾಯಭಾರಿಯಾಗಿ ಮುಂದುವರಿಯುತ್ತಾರೆ. ಈ ವರ್ಷದ ಐಪಿಎಲ್ ನಂತರ ಧೋನಿಯವರು ಸಾವಯವ ರಾಸಾಯನಿಕ ಉದ್ಯಮಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.

ಧೋನಿ ಮತ್ತು ಇತರ ಕ್ರಿಕೆಟರ್ ಗಳ ವ್ಯವಸ್ಥಾಪಕ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆರ್ಕ ಸ್ಪೋರ್ಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮಿಹಿರ್ ದಿವಾಕರ್, ನಿಯೊ ಗ್ಲೋಬಲ್ ನಲ್ಲಿ ಸಹಭಾಗಿಯಾಗಲಿದ್ದಾರೆ ಧೋನಿ. ಮಾರುಕಟ್ಟೆಯಲ್ಲಿ ಈ ಕಂಪೆನಿ ಈಗಾಗಲೇ ಎರಡು ಉತ್ಪನ್ನಗಳನ್ನು ಬಿಟ್ಟಿದ್ದು ಅದನ್ನು ಮುಂದಿನ ದಿನಗಳಲ್ಲಿ 15ಕ್ಕೆ ಹೆಚ್ಚಿಸುವ ಯೋಜನೆ ಹೊಂದಿದೆ. ಧೋನಿಯವರು ನಮ್ಮ ಜೊತೆ ದೊಡ್ಡ ಮಟ್ಟದಲ್ಲಿ ಕೈಜೋಡಿಸಲಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಮುಂದಿನ ಸೆಪ್ಟೆಂಬರ್ ನಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು. ಧೋನಿಯವರು ತಮ್ಮ ಫಾರ್ಮ್ ಹೌಸ್ ನಲ್ಲಿ ಸಾವಯವ ರಾಸಾಯನಿಕ ಬಗ್ಗೆ ಪರೀಕ್ಷೆ ಮಾಡಿದ್ದಾರೆ ಎಂದು ಹೇಳುತ್ತಾರೆ.

ನ್ಯೂ ಗ್ಲೋಬಲ್ ಮುಂಬೈ ಮತ್ತು ಗುಜರಾತ್ ನ ಭಾವನಗರದಲ್ಲಿ ಫ್ಯಾಕ್ಟರಿಗಳನ್ನು ಹೊಂದಿದೆ. ದೆಹಲಿಯಲ್ಲಿ ಕಚೇರಿಯಿದೆ. ಧೋನಿಯವರು ಇವುಗಳನ್ನು ನೋಡಿ ಖುಷಿಯಾಗಿದ್ದಾರೆ. ಧೋನಿಯವರು ನಮ್ಮ ಕಂಪೆನಿ ಜೊತೆ ಬೃಹತ್ ಮಟ್ಟದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಐಪಿಎಲ್ ನಂತರ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದರು.

SCROLL FOR NEXT