ಕ್ರಿಕೆಟ್

ಪುತ್ರನಿಗೆ ನಾಮಕರಣ ಮಾಡಿದ ಹಾರ್ದಿಕ್ ಪಾಂಡ್ಯ, ನತಾಶಾ; ಫೋಟೋ ಹಂಚಿಕೊಂಡ ದಂಪತಿ

Srinivas Rao BV

ಸ್ಟಾರ್ ದಂಪತಿ ಹಾರ್ದಿಕ್ ಪಾಂಡ್ಯ- ನತಾಶಾ ಸ್ಟ್ಯಾನ್‌ಕೊವಿಚ್‌ ತಮ್ಮ ಪುತ್ರನಿಗೆ ನಾಮಕರಣ ಮಾಡಿದ್ದು, ಹೆಸರನ್ನು ಬಹಿರಂಗಪಡಿಸಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮಗನ ಹೆಸರು ಅಗಸ್ತ್ಯ ಎಂದು ಪಾಂಡ್ಯ ಪ್ರಕಟಿಸಿದ್ದು, ತಾವೇ ಮಕ್ಕಳಾಟಿಕೆಯೊಂದಿಗೆ ಆಡುತ್ತಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದರು.

ಜುಲೈ 30 ರಂದು ಪಾಂಡ್ಯ ದಂಪತಿಗೆ ಗಂಡು ಮಗು ಜನಿಸಿತ್ತು. ಜನವರಿಯಲ್ಲಿ ಬಾಲಿವುಡ್‌ ಬೆಡಗಿ ಹಾಗೂ ಕನ್ನಡದ 'ದನಾಕಾಯೋನು' ಸಿನಿಮಾದಲ್ಲಿ ನಟಿಸಿದ್ದ ಸರ್ಬಿಯಾ ಮೂಲದ ನಟಿ ನತಾಶಾ ಸ್ಟ್ಯಾನ್‌ಕೊವಿಚ್‌ ಅವರೊಟ್ಟಿಗೆ ಹಾರ್ದಿಕ್ ಪಾಂಡ್ಯ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದರು.

SCROLL FOR NEXT