ಕ್ರಿಕೆಟ್

ವಿರಾಟ್ ಕೊಹ್ಲಿ ನೇತೃತ್ವದ ಈಗಿನ ಟೆಸ್ಟ್ ತಂಡ ಅತ್ಯುತ್ತಮವಾಗಿದೆ- ಗವಾಸ್ಕರ್

Nagaraja AB

ಮುಂಬೈ: ವಿರಾಟ್ ಕೊಹ್ಲಿ ನೇತೃತ್ವದಲ್ಲಿನ ಈಗಿನ ಟೆಸ್ಟ್ ತಂಡ ಅತ್ಯುತ್ತಮವಾಗಿದೆ ಎಂದು ಲಿಜೆಂಡರಿ ಬ್ಯಾಟ್ಸ್ ಮನ್ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಮಾರಕ ಬೌಲಿಂಗ್ ದಾಳಿ ಹಿಂದಿನ ಯುಗಗಳ ತಂಡಗಳಿಗಿಂತ ಹೆಚ್ಚಿನ ಸಮತೋಲನದಿಂದ ಕೂಡಿದೆ ಎಂದು ಅವರು ತಿಳಿಸಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿನ ಟೀಂ ಇಂಡಿಯಾ ಪ್ರಸ್ತುತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದೆ. 2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಸಾಧನೆ ಮಹತ್ವದ್ದಾಗಿದೆ.

ಸಮತೋಲನ,  ಸಾಮರ್ಥ್ಯ ಹಾಗೂ ಕೌಶಲ್ಯದ ದೃಷ್ಟಿಯಿಂದ, ಭಾರತೀಯ ಟೆಸ್ಟ್ ತಂಡವಾಗಿದೆ ಎಂದು ನಂಬಿದ್ದೇನೆ. ಇಂತಹ ಬೇರೊಂದು ಅತ್ಯುತ್ತಮ ಭಾರತೀಯ ಟೆಸ್ಟ್ ತಂಡವನ್ನು ಯೋಚಿಸಲು ಸಾಧ್ಯವಿಲ್ಲ ಎಂದು ಇಂಡಿಯಾ ಟುಡೆ ಇ- ಕನ್ ಕ್ಲೇವ್ ಸ್ಪೂರ್ತಿಯ ಸರಣಿಯಲ್ಲಿ  ಗವಾಸ್ಕರ್ ತಿಳಿಸಿದರು.

ಮಾರಕ ಬೌಲಿಂಗ್ ದಾಳಿಯಿಂದ ಪ್ರತಿಕೂಲ ಸಂದರ್ಭದಲ್ಲಿ ಪಂದ್ಯ ಗೆಲ್ಲಲು ಸಾಧ್ಯವಾಗಿದೆ. ಯಾವುದೇ ನೆಲದಲೂ ಅವರು ಗೆಲುವು ಸಾಧಿಸುತ್ತಾರೆ. 1980ರಲ್ಲಿ ಇದೇ ರೀತಿಯ ಬ್ಯಾಟಿಂಗ್ ತಂಡವಿತ್ತು ಆದರೆ, ವಿರಾಟ್ ತಂಡ ಹೊಂದಿರುವಂತಹ ಬೌಲಿಂಗ್ ಇರಲಿಲ್ಲ ಎಂದು ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಹೇಳಿದರು.

ಜಸ್ಪೀತ್ ಬೂಮ್ರಾ,ಮೊಹಮ್ಮದ್ ಶಮಿ,ಇಶಾಂತ್ ಶರ್ಮಾ, ಉಮೇಶ್ ಯಾದವ್ , ಭುವನೇಶ್ವರ್ ಕುಮಾರ್ ಅಂತಹ ವಿಶ್ವದರ್ಜೆಯ ವೇಗಿಗಳು ಟೀಂ ಇಂಡಿಯಾದಲ್ಲಿದ್ದು, ಇತ್ತೀಚಿನ ವರ್ಷಗಳಲ್ಲಿ ವಿಶ್ವದ ನಂಬರ್ 1 ತಂಡವನ್ನಾಗಿ ಮಾಡಿದ್ದಾರೆ ಎಂದು ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

SCROLL FOR NEXT