ಕ್ರಿಕೆಟ್

ಮೂರನೇ ಏಕದಿನ: ಪಾಂಡ್ಯ, ಜಡೇಜಾ ಅಬ್ಬರದ ಬ್ಯಾಟಿಂಗ್; ಅಸೀಸ್ ಪಡೆಗೆ ಗೆಲ್ಲಲು 303 ರನ್ ಗುರಿ

Raghavendra Adiga

ಕ್ಯಾನ್ಬೆರಾ: ಬುಧವಾರ ಇಲ್ಲಿನ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಅಂತಿಮ ಓಡಿಐ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ302 ರನ್ ಕಲೆಹಾಕುವ ಮೂಲಕ ಅತಿಥೇಯ ಅಸೀಸ್ ಗೆ ಗೆಲ್ಲಲು 303 ರನ್ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ (92*), ರವೀಂದ್ರ ಜಡೇಜಾ (66*), ಕ್ಯಾಪ್ಟನ್ ವಿರಾಟ್ ಕೊಹ್ಲಿ (63) ರನ್ ಸಿಡಿಸಿ ಭಾರತ ಉತ್ತಮ ಮೊತ್ತ ಕಲೆಹಾಕಲು ನೆರವಾದರು.

ಆದರೆ ಆರಂಭಿಕರಾದ ಶಿಖರ್ ಧವನ್ ಕೇವಲ 16 ರನ್ ಗಳಿಸಿ ನಿರಾಶೆ ಮೂಡಿಸಿದ್ದರೆ ಎಸ್. ಗಿಲ್ 33, ಶ್ರೇಯಸ್ ಅಯ್ಯರ್ 19 ರನ್ ಗಳಿಸಿದ್ದರು. ಇನ್ನು ಕನ್ನಡಿಗ ಕೆ.ಎಲ್. ರಾಹುಲ್ ಸಹ ಕೇವಲ 5 ರನ್ ಕಲೆಹಾಕಿ ಪೆವಿಲಿಯನ್ ಹಾದಿ ಹಿಡಿದರು. 

ಆಸ್ಟ್ರೇಲಿಯಾ ಪರ ಆಸ್ಟನ್ ಅಗರ್ 2, ಜೋಶ್‌ ಹ್ಯಾಝೆಲ್‌ವುಡ್, ಸೀನ್ ಅಬೊಟ್ಟ್,  ಮತ್ತು ಆಡಮ್ ಜಂಪಾ ತಲಾ ಒಂದು ವಿಕೆಟ್ ಪಡೆದಿದ್ದರು.

ಕಳೆದ ಎರಡು ಪಂದ್ಯಗಳಲ್ಲಿ ಭಾರತ, ಸೋಲು ಕಂಡಿದೆ. ಹಾಗಾಗಿ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ. ಇದೀಗ ಭಾರತಕ್ಕೆ ಈ ಗೆಲುವು ಗೌರವದ ಪ್ರಶ್ನೆಯಾಗಿದೆ. 

SCROLL FOR NEXT