ವಿಡಿಯೋ ಗ್ರ್ಯಾಬ್ 
ಕ್ರಿಕೆಟ್

ಚಹಾಲ್‌‌ರನ್ನು ಜಡೇಜಾಗೆ ಸಬ್‍ಸ್ಟ್ಯೂಟ್ ಆಡಿಸಿದ್ದಕ್ಕೆ ಹೌಹಾರಿದ ಜಸ್ಟಿನ್ ಲ್ಯಾಂಗರ್, ವಿಡಿಯೋ ವೈರಲ್!

ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಪಾತ್ರವಹಿಸಿದ್ದು ಜಡೇಜಾಗೆ ಸಬ್‍ಸ್ಟ್ಯೂಟ್ ಆಗಿ ಆಡಿದ್ದ ಯಜುವೇಂದ್ರ ಚಹಾಲ್, ಇನ್ನು ಚಹಾಲ್ ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಆಸ್ಟ್ರೇಲಿಯಾ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೌಹಾರಿರುವ ವಿಡಿಯೋ ವೈರಲ್ ಆಗಿದೆ.

ಕ್ಯಾನ್ ಬೆರಾ: ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಪಾತ್ರವಹಿಸಿದ್ದು ಜಡೇಜಾಗೆ ಸಬ್‍ಸ್ಟ್ಯೂಟ್ ಆಗಿ ಆಡಿದ್ದ ಯಜುವೇಂದ್ರ ಚಹಾಲ್, ಇನ್ನು ಚಹಾಲ್ ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಆಸ್ಟ್ರೇಲಿಯಾ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೌಹಾರಿರುವ ವಿಡಿಯೋ ವೈರಲ್ ಆಗಿದೆ. 

ಮೊದಲ ಟಿ20 ಪಂದ್ಯದಲ್ಲಿ ಆಡಿದ್ದ ರವೀಂದ್ರ ಜಡೇಜಾ ಅವರು ಅದ್ಭುತ ಬ್ಯಾಟಿಂಗ್ ಮಾಡಿ 23 ಎಸೆತಗಳಲ್ಲಿ 44 ರನ್ ಪೇರಿಸಿದ್ದರು. ಕೊನೆಯ ಓವರ್ ನಲ್ಲಿ ಮಿಚೆಲ್ ಸ್ಟಾರ್ಕ್ ಬೌನ್ಸರ್ ನಿಂದ ಜಡೇಜಾ ಗಾಯಗೊಂಡರು. ಹೀಗಾಗಿ ಅವರ ಬದಲಿಗೆ ಸಬ್‍ಸ್ಟ್ಯೂಟ್ ಆಗಿ ಯಜುವೇಂದ್ರ ಚಹಾಲ್ ರನ್ನು ಆಡಿಸಲಾಯಿತು. 

ಇನ್ನು ಯಜುವೇಂದ್ರ ಚಹಾಲ್ ಬೌಲಿಂಗ್ ಮಾಡಿದ್ದು ಆರೋನ್ ಫಿಂಚ್ ಮತ್ತು ಶಾರ್ಟ್ ಅದ್ಭುತವಾಗಿ ಜೊತೆಯಾಟವಾಡುತ್ತಿದ್ದು ಫಿಂಚ್ ರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾಗೆ ಚಹಾಲ್ ಮೊದಲ ಆಘಾತ ನೀಡಿದರು. ಈ ವೇಳೆ ಜಸ್ಟಿನ್ ಲ್ಯಾಂಗರ್ ರೆಫ್ರಿ ಡೇವಿಡ್ ಬೂನ್ ವಿರುದ್ಧ ಹೌಹಾರಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತ್ತು. 162 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಪೇರಿಸಿದ್ದು 11 ರನ್ ಗಳಿಂದ ಭಾರತಕ್ಕೆ ಶರಣಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?