ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

'ಇವರೆಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟರ್ಸ': ಕಳಪೆ ಫೀಲ್ಡಿಂಗ್‌ ಮಾಡಿದ ಟೀಂ ಇಂಡಿಯಾ ನೆಟ್ಟಿಗರ ಟ್ರೋಲ್‌ ಗೆ ಗುರಿ, ವಿಡಿಯೋ ವೈರಲ್

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯೂದ್ದಕ್ಕೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ ಸೇರಿದಂತೆ ಘಟಾನುಗಟಿ ಫೀಲ್ಡರ್ ಗಳೇ ಸುಲಭದ ಕ್ಯಾಚ್ ಗಳನ್ನು ಕೈಚೆಲ್ಲಿದ್ದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಕೊಹ್ಲಿ-ಪಾಂಡ್ಯ
Vishwanath S
Updated On : 9 Dec 2020, 5:52 pm

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯೂದ್ದಕ್ಕೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ ಸೇರಿದಂತೆ ಘಟಾನುಗಟಿ ಫೀಲ್ಡರ್ ಗಳೇ ಸುಲಭದ ಕ್ಯಾಚ್ ಗಳನ್ನು ಕೈಚೆಲ್ಲಿದ್ದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್‌ ಮಾಡಿದ ಭಾರತ ತಂಡವನ್ನು ಕ್ರಿಕೆಟ್‌ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಪಡೆ 12 ರನ್‌ಗಳಿಂದ ಸೋಲು ಅನುಭವಿಸಿತಾದರೂ ಟಿ20 ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 186 ರನ್‌ ದಾಖಲಿಸಿತು. ಕಳೆದ ಪಂದ್ಯದ ಲಯವನ್ನು ಮುಂದುವರಿಸಿದ ಮ್ಯಾಥ್ಯೂ ವೇಡ್,‌ ಆರಂಭದಿಂದಲೂ ಭಾರತ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು ಆಡಿದ 53 ಎಸೆತಗಳಿಗೆ 80 ರನ್‌ ಗಳಿಸಿದರು. ವೇಡ್‌ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ ಹಾಗೂ ಏಳು ಬೌಂಡರಿಗಳು ಒಳಗೊಂಡಿವೆ.

Advertisement

Advertisement

ಮ್ಯಾಥ್ಯೂ ವೇಡ್‌ ಜತೆಗೆ ಮತ್ತೊಂದು ತುದಿಯಲ್ಲಿ ಹೆಚ್ಚು ಹೊತ್ತು ಬ್ಯಾಟಿಂಗ್‌ ಮಾಡಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ 36 ಎಸೆತಗಳಲ್ಲಿ 54 ರನ್‌ ಚೆಚ್ಚಿದ್ದರು. ಇವರ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳನ್ನು ಒಳಗೊಂಡಿವೆ. ವೇಡ್‌ ಹಾಗೂ ಮ್ಯಾಕ್ಸ್‌ವೆಲ್‌ ಜೋಡಿ ಮೂರನೇ ವಿಕೆಟ್‌ಗೆ 90 ರನ್‌ ಜತೆಯಾಟವಾಡಿತ್ತು.

ಭಾರತದ ಆಫ್‌ ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ ತನ್ನ ಪಾಲಿನ ನಾಲ್ಕು ಓವರ್‌ಗಳಿಗೆ 34 ರನ್‌ ನೀಡಿ ಎರಡು ವಿಕೆಟ್‌ ಕಬಳಿಸಿದ್ದರು. ಟಿ ನಟರಾಜನ್‌ ಹಾಗೂ ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಈ ಇಬ್ಬರ ಉತ್ತಮ ಬ್ಯಾಟಿಂಗ್‌ ಹೊರತಾಗಿಯೂ ಆಸ್ಟ್ರೇಲಿಯಾ ದೊಡ್ಡ ಮೊತ್ತ ಕಲೆ ಹಾಕಲು ಭಾರತ ಕಳಫೆ ಫೀಲ್ಡಿಂಗ್‌ ಕೂಡ ಒಂದು ಕಾರಣವಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ತಂಡದ ಆಟಗಾರರ ಫೀಲ್ಡಿಂಗ್‌ ತುಂಬಾ ಕೆಟ್ಟದಾಗಿತ್ತು. ಕೈಗೆ ಸಿಕ್ಕ ಹಲವು ಕ್ಯಾಚ್‌ಗಳನ್ನು ಭಾರತೀಯ ಆಟಗಾರರು ಕೈಚೆಲ್ಲಿದ್ದರಿಂದ ಎದುರಾಳಿ ತಂಡ ಹೆಚ್ಚಿನ ಮೊತ್ತ ದಾಖಲಿಸಲು ಸಾಧ್ಯವಾಗಿತ್ತು.

ಅರ್ಧಶತಕ ಸಿಡಿಸಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರಿಗೆ ಭಾರತ ಎರಡು ಜೀವ ದಾನವನ್ನು ನೀಡಿತ್ತು. ಮೊದಲನೇ ಬಾರಿ ಯುಜ್ವೇಂದ್ರ ಚಹಲ್‌ ನೋಬಾಲ್‌ ಹಾಕಿ ಅವರಿಗೆ ಜೀವದಾನ ನೀಡಿದ್ದರೆ, ಮತ್ತೊಮ್ಮೆ ಶಾರ್ದೂಲ್‌ ಠಾಕೂರ್ ಓವರ್‌ನಲ್ಲಿ ದೀಪಕ್‌ ಚಹರ್‌ ಕ್ಯಾಚ್‌ ಕೈಚಿಲ್ಲಿದ್ದರು. ಇದಕ್ಕೂ ಮುನ್ನ ಸ್ಟೀವನ್‌ ಸ್ಮಿತ್‌ ಅವರನ್ನು ಕೆ.ಎಲ್‌ ರಾಹುಲ್‌ ಸುಲಭವಾಗಿ ಸ್ಟಂಪಿಂಗ್‌ ಮಿಸ್‌ ಮಾಡಿದ್ದರು. ಜತೆಗೆ, ಇನ್ನುಳಿದ ಆಟಗಾರರೂ ಮಿಸ್‌ ಫೀಲ್ಡಿಂಗ್‌ ಮಾಡಿದ್ದರು.

ಟೀಮ್‌ ಇಂಡಿಯಾ ಕೆಟ್ಟ ಫೀಲ್ಡಿಂಗ್‌ ಮಾಡಿದ್ದರಿಂದ ಸಿಟ್ಟಿಗೆದ್ದ ಅಭಿಮಾನಿಗಳು ಟ್ವಟರ್‌ನಲ್ಲಿ ಕೊಹ್ಲಿ ಪಡೆಯನ್ನು ಟ್ರೋಲ್ ಮಾಡಿದ್ದಾರೆ. ಅಭಿಮಾನಿಯೊಬ್ಬ ಭಾರತದ ಫೀಲ್ಡಿಂಗ್‌ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಪರಿಶೀಲಿಸಬೇಕೆಂದು ಆಗ್ರಹಿಸಿದ್ದಾನೆ. ಮತ್ತೊಬ್ಬ ಅಭಿಮಾನಿ ಶ್ರೀಧರ್ ಅವರನ್ನು ಫೀಲ್ಡಿಂಗ್‌ ಕೋಚ್‌ ನೇಮಕ ಮಾಡಿದಾಗಿನಿಂದಲೂ ಭಾರತ ತಂಡ, ಪಾಕಿಸ್ತಾನಕ್ಕಿಂತ ಕೆಟ್ಟದಾಗಿ ಫೀಲ್ಡಿಂಗ್ ಮಾಡುತ್ತಿದೆ ಎಂದು ದೂಷಿಸಿದರು.

ಇನ್ನು ವಿರಾಟ್ ಕೊಹ್ಲಿ ಸಹ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ವಾಡೆ ಅವರ ಸುಲಭ ಕ್ಯಾಚ್ ಕೈಚೆಲ್ಲಿದ್ದರು ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments