ಕ್ರಿಕೆಟ್

ಆಡಿಲೇಡ್ ಟೆಸ್ಟ್: ಭಾರತ ಪ್ರಥಮ ಇನ್ನಿಂಗ್ಸ್ ನಲ್ಲಿ 244 ರನ್ ಗೆ ಆಲೌಟ್, ಕೊಹ್ಲಿ ರನೌಟ್ ಪ್ರಮುಖ ತಿರುವು- ಲಿಯಾನ್ 

Nagaraja AB

ಆಡಿಲೇಡ್‌: ಇಲ್ಲಿನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಿಂಕ್ ಬಾಲ್  ಡೇ-ನೈಟ್‌ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಟೀಮ್ ಇಂಡಿಯಾ, ನಾಯಕ ವಿರಾಟ್ ಕೊಹ್ಲಿ ಅರ್ಧಶತಕ (74) ಹೊರತಾಗಿಯೂ 93. 1 ಓವರ್ ಗಳಲ್ಲಿ 244 ರನ್ ಗಳಿಗೆ ಆಲೌಟ್ ಆಯಿತು.

ಮೊದಲ ದಿನ  6 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ ಟೀಂ ಇಂಡಿಯಾ ಇಂದು ಎರಡನೇ ದಿನದಾಟ ಮುಂದುವರೆಸಿದಾಗ 23 ನಿಮಿಷದೊಳಗೆ 11 ರನ್ ಗಳಿಸುವುದರೊಳಗೆ ಉಳಿದಿದ್ದ ನಾಲ್ಕು ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. 

 ಮೊದಲನೇ ದಿನ ಅತ್ಯುತ್ತಮ ಬ್ಯಾಟಿಂಗ್‌ ಮಾಡುತ್ತಿದ್ದ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ರನೌಟ್‌ ಮಾಡಿದ್ದು ನಮಗೆ ಪ್ರಮುಖ ತಿರುವು ಸಿಕ್ಕಿತು ಎಂದು ಆಸ್ಟ್ರೇಲಿಯಾ ಹಿರಿಯ ಸ್ಪಿನ್ನರ್‌ ನೇಥನ್‌ ಲಿಯಾನ್‌ ಹೇಳಿದರು. 

ಮೊದಲನೇ ದಿನ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ ಮೂರು ವಿಕೆಟ್‌ ಕಳೆದುಕೊಂಡು 188 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಈ ವೇಳೆ ವಿರಾಟ್‌ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಜೋಡಿ ಉತ್ತಮ ಬ್ಯಾಟಿಂಗ್‌ ಮಾಡುವ ಮೂಲಕ ಭಾರತಕ್ಕೆ ದೊಡ್ಡ ಮೊತ್ತ ಕಲೆಹಾಕುವ ಭರವಸೆ ಮೂಡಿಸಿತ್ತು. ಆದರೆ, ಅರ್ಧಶತಕ ಸಿಡಿಸಿ ಆಡುತ್ತಿದ್ದ ವಿರಾಟ್‌ ಕೊಹ್ಲಿಯನ್ನು ರಹಾನೆ ರನೌಟ್‌ ಮಾಡಿಸಿದರು. ನಂತರ ಭಾರತ 233 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು. 

ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೇಥನ್‌ ಲಯಾನ್, "ನಾಯಕ ವಿರಾಟ್‌ ಕೊಹ್ಲಿ ರನೌಟ್‌ ಮಾಡಿದ್ದು, ನಮಗೆ ದೊಡ್ಡ ವಿಕೆಟ್‌ ಆಗಿತ್ತು. ಆಶಷ್‌ ಬಳಿಕ ನಮಗೆ ಇದು ಉತ್ತಮ ಆರಂಭ ಇದಾಗಿದೆ. ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್‌ ಮಾಡುತ್ತಿದ್ದರು. ಆ ವಿಕೆಟ್‌ ಪಡೆದಿದ್ದು ನಮಗೆ ತುಂಬಾ ಖುಷಿಯಾಯಿತು ಎಂದು ಹೇಳಿದರು.

ವಿರಾಟ್‌ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರಾ ಅವರ ವಿರುದ್ಧ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಲಯಾನ್‌, ಇವರಿಬ್ಬರ ಬ್ಯಾಟಿಂಗ್‌ ಶೈಲಿ ವಿಭಿನ್ನವಾಗಿದ್ದು, ಇವರ ವಿರುದ್ಧ ಸವಾಲು ಖುಷಿ ನೀಡಿದೆ ಎಂದರು. 

"ಈ ಇಬ್ಬರಿಗೂ ಬೌಲಿಂಗ್‌ ಮಾಡುವಾಗ ಸಂವಹನ ಚೆನ್ನಾಗಿತ್ತು ಹಾಗೂ ಮೋಜಿನಿಂದ ಕೂಡಿತ್ತು. ಈ ಇಬ್ಬರೂ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು. ಮೊದಲ ದಿನ ಒಂದು ವಿಕೆಟ್ ಪಡೆದಿದ್ದು, ಅದ್ಭುತ ಸವಾಲಾಗಿತ್ತು. ಕೊಹ್ಲಿ ಹಾಗೂ ಪೂಜಾರಾ ಇಬ್ಬರ ಬ್ಯಾಟಿಂಗ್ ಶೈಲಿ ವಿಭಿನ್ನವಾಗಿತ್ತು. ಉತ್ತಮ ಬ್ಯಾಟ್ಸ್‌ಮನ್‌ಗಳ ಎದುರು ಬೌಲಿಂಗ್‌ ಮಾಡುವಾಗ ನಾನು ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತೇನೆ ಎಂದು ಲಿಯಾನ್ ತಿಳಿಸಿದರು.

SCROLL FOR NEXT