ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್: ಅಜಿಂಕ್ಯಾ ರೆಹಾನೆ ಸ್ಥಿರ ಬ್ಯಾಟಿಂಗ್; ಅರ್ಧ ಶತಕ; ಭಾರತಕ್ಕೆ ಮುನ್ನಡೆ

Srinivas Rao BV

2ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯಾ ರೆಹಾನೆ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ನ ಎರಡನೇ ದಿನದ ಟೀ ಬ್ರೇಕ್ ವೇಳೆಗೆ ತಮ್ಮ ಸ್ಥಿರ ಬ್ಯಾಟಿಂಗ್ ನ ಮೂಲಕ ಅರ್ಧ ಶತಕ ದಾಖಲಿಸಿದ ಪರಿಣಾಮ ಭಾರತ ಸುಸ್ಥಿತಿಯಲ್ಲಿದೆ.

ಆಸ್ಟ್ರೇಲಿಯಾ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ 195 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಭಾರತ ಆಸ್ಟ್ರೇಲಿಯಾ ನೀಡಿದ್ದ ಗುರಿಯನ್ನು ಸುಲಭವಾಗಿ ತಲುಪಿದ್ದು ಟೀ ಬ್ರೇಕ್ ವೇಳೆಗೆ 5 ವಿಕೆಟ್ ನಷ್ಟಕ್ಕೆ 206 ರನ್ ಗಳನ್ನು ಗಳಿಸಿ ಸುಸ್ಥಿತಿಯಲ್ಲಿದೆ.

ಅಜಿಂಕ್ಯಾ ರೆಹಾನೆ ಹಾಗೂ ರವೀಂದ್ರ ಜಡೇಜಾ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದು, ಅನುಕ್ರಮವಾಗಿ 53 ರನ್ ಗಳು 4 ರನ್ ಗಳನ್ನು ಗಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭಿಕ ಆಟಗಾರರಾದ ಶುಭ್ ಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ 11 ಎಸೆತಗಳ ಅಂತರದಲ್ಲಿ ಗಿಲ್ ಹಾಗೂ ಪೂಜಾರಾ ವಿಕೆಟ್ ಒಪ್ಪಿಸಿ ನಡೆದಾಗ ಭಾರತ ಸಂಕಷ್ಟದಲ್ಲಿತ್ತು. ನಂತರ ಊಟದ ವಿರಾಮದ ವೇಳೆಗೆ ಹನುಮ ವಿಹಾರಿ (29) ಹಾಗೂ ರಿಷಭ್ ಪಂತ್ ವಿಕೆಟ್ ಗಳನ್ನು ಕಳೆದುಕೊಂಡಾಗ ಅಜಿಂಕ್ಯಾ ರೆಹಾನೆ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ, ಆಸ್ಟ್ರೇಲಿಯಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. ಒಂದೆಡೆ ಅಜಿಂಕ್ಯಾ ರೆಹಾನೆ ಅವರ ಸ್ಥಿರತೆ ಹಾಗೂ ರಿಷಭ್ ಪಂತ್ ಅವರ ಬಿರುಸಿನ ಬ್ಯಾಟಿಂಗ್ ಎದುರು ಆಸ್ಟ್ರೇಲಿಯಾ ಬೌಲರ್ ಗಳು ಮಂಕಾದರು.

ಮಿಚೆಲ್ ಸ್ಟಾರ್ಕ್ 49 ರನ್ ಗಳನ್ನು ನೀಡಿ 2 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ 50 ರನ್ ಗಳನ್ನು ನೀಡಿ 2 ವಿಕೆಟ್ ಕಬಳಿಸಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
 

SCROLL FOR NEXT