ಕ್ರಿಕೆಟ್

3ನೇ ಏಕದಿನ: ಭಾರತದ ವಿರುದ್ಧ ಕಿವೀಸ್ ಗೆ 5 ವಿಕೆಟ್ ಗಳ ಭರ್ಜರಿ ಜಯ, 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್

Srinivasamurthy VN

ಮೌಂಟ್‌ಮೌಂಗಾನುಯಿ: ಪ್ರವಾಸಿ ಭಾರತ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ, 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

ಭಾರತ ನೀಡಿದ್ದ 297ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಕಿವೀಸ್ ಪಡೆ ಮಾರ್ಟಿನ್ ಗಪ್ಟಿಲ್ (66ರನ್), ಹೆನ್ರಿ ನಿಕೋಲಸ್ (80ರನ್) ಮತ್ತು ಗ್ರಾಂಡ್ ಹೋಮ್ (ಅಜಯ 54 ರನ್) ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಕೇವಲ 47.1 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಆ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಆರಂಭದಿಂದಲೂ ಕಿವೀಸ್ ಬ್ಯಾಟ್ಸ್ ಮನ್ ಗಳ ವಿಕೆಟ್ ಪಡೆಯಲು ಪರದಾಡಿದ ಭಾರತೀಯ ಬೌಲರ್ ಗಳ ಮೇಲೆ ಅಕ್ಷರಶಃ ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳು ಸವಾರಿ ಮಾಡಿದರು. ಅಂತಿಮವಾಗಿ 47.1 ಓವರ್ ನಲ್ಲಿ 300 ರನ್ ಗಳಿಸಿ 3ನೇ ಏಕದಿನ ಪಂದ್ಯವನ್ನೂ ಐದು ವಿಕೆಟ್ ಅಂತರದಲ್ಲಿ ಗೆದ್ದು ಬೀಗಿದರು.

ಯುಜವೇಂಜ್ರ ಚಹಲ್ 3 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. 80 ರನ್ ಸಿಡಿಸಿ ಕಿವೀಸ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಹೆನ್ರಿ ನಿಕೋಲಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂತೆಯೇ ಸರಣಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಸ್ ಟೇಲರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

SCROLL FOR NEXT