ಕ್ರಿಕೆಟ್

ಕಿವೀಸ್ ವಿರುದ್ಧ ಮೊದಲ ಟೆಸ್ಟ್: ಕಾಡಿದ ವರುಣ, ದಿನದಂತ್ಯಕ್ಕೆ ಟೀಂ ಇಂಡಿಯಾ 122/5

Raghavendra Adiga

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟ್ಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಲ್ಲಿಂಗ್ಟನ್‌ನ ಬಾಸಿನ್ ರಿವರ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಟೀ ವಿರಾಮದ ಬಳಿಕ ಮಳೆಯಿಂದಾಗಿ ಆಟಕ್ಕೆ ಅಡಚಣೆಯಾಗಿದ್ದು ಮೊದಲ ದಿನದಂತ್ಯದ ವೇಳೆಗೆ ಟೀಂ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ.

ಟಾಸ್ ಗೆದ್ದ ಅತಿಥೇಯ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ಆಯ್ದುಕೊಂಡಿದ್ದರು. ಆದರೆ ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಟಿಂ ಇಂಡಿಯಾ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. 

ಪ್ರಾರಂಭಿಕರಾದ ಪೃಥ್ವಿ ಶಾ(16) ಚೇತೇಶ್ವರ ಪೂಜಾರ 11)  ವಿರಾಟ್ ಕೊಹ್ಲಿ (2) ಕೂಡ ಹೆಚ್ಚು ಹೊತ್ತು ನಿಲ್ಲದೆ ಪೆವಿಲಿಯನ್ ಹಾದಿ ತುಳಿದಿದ್ದರು.

ಆದರೆ ಕನ್ನಡಿಗರಾದ ಮಯಾಂಕ್ ಅಗರ್ವಾಲ್  ತಮ್ಮ ದಿಟ್ಟ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. 84  ಎಸೆತಗಳನ್ನು ಎದುರಿಸಿದ ಮಯಾಂಕ್ ಐದು ಬೌಂಡರಿಯೂ ಸೇರಿ ಒಟ್ಟೂ 34 ರನ್ ಗಳಿಸಿದ್ದರು. ಇನ್ನು ಟೀಂ ಇಂಡಿಯಾ ಉಪನಾಯಕರಾದ  ಅಜಿಂಕ್ಯ ರಹಾನೆ (38*) ಔಟಾಗದೆ ಕಡೆವರೆಗೆ ಕ್ರೀಸಿನಲ್ಲಿದ್ದು ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ್ದರು. 

ಇನ್ನುಳಿದಂತೆ ಹನುಮ ವಿಹಾರಿ (7) ರನ್ ಗಳಿಸಿ ಔಟಾದರೆ ರಿಷಬ್ ಪಂತ್ (10*) ಅಜೇಯರಾಗಿ ಉಳಿದರು.ಒಟ್ತಾರೆ ಮೊದಲ್ ದಿನ ಕಿವೀಊಸ್ ಬೌಲರ್ ಗಳು ಭಾರತೀಯರನ್ನು ಕಟ್ಟಿಹಾಕುವಲ್ಲಿ ಸಪಲವಾಗಿದ್ದರು. 

ಸಂಕ್ಷಿಪ್ತ ಸ್ಕೋರ್
122/5 (ಅಜಿಂಕ್ಯ ರಹಾನೆ 38 *, ಮಾಯಾಂಕ್ ಅಗರ್ವಾಲ್ 34; ಕೈಲ್ ಜೇಮೀಸನ್ 3/38)

SCROLL FOR NEXT