ಕ್ರಿಕೆಟ್

ನಾಯಕ ವಿರಾಟ್ ಕೊಹ್ಲಿ ಔಟ್ ಮಾಡಲು ರೂಪಿಸಿದ್ದ ಯೋಜನೆ ಬಹಿರಂಗಪಡಿಸಿದ ಟ್ರೆಂಟ್ ಬೌಲ್ಟ್ 

Nagaraja AB

ವೆಲ್ಲಿಂಗ್ಟನ್ : ಭಾನುವಾರ ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡರಲ್ಲೂ ಟ್ರೆಂಟ್ ಬೌಲ್ಟ್ ತೋರಿದ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಇಲ್ಲಿನ ಬೇಸಿನ್ ರಿವರ್ ಅಂಗಳದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಮೂರನೇ ದಿನವೂ ಆತಿಥೇಯ ನ್ಯೂಜಿಲೆಂಡ್‌ ಮುನ್ನಡೆ ಸಾಧಿಸಿತು.

ಭಾರತದ ಅತ್ಯದ್ಭುತ ಬ್ಯಾಟ್ಸ್‌ಮನ್‌ ಹಾಗೂ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಮುಂದುವರಿದಿದ್ದು ಇದು ನ್ಯೂಜಿಲೆಂಡ್ ತಂಡಕ್ಕೆ ವರದಾನವಾಗಿದೆ ಎಂದು ಕಿವೀಸ್ ಹಿರಿಯ ವೇಗಿ ಬೌಲ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಪ್ರಸ್ತುತ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ರನ್ ಗಳಿಸುವ ಪ್ರದೇಶಗಳನ್ನು ನಾವು ನಿಯಂತ್ರಣ ಮಾಡಿದ್ದು ಪಂದ್ಯದ ಮೇಲೆ ನಾವು ಹಿಡಿತ ಸಾಧಿಸಲು ಸಾಧ್ಯವಾಯಿತು. ಅವರನ್ನು ಕೇವಲ 19 ರನ್‌ ಗಳಿಗೆ ಕಟ್ಟಿಹಾಕಿದ್ದು ನಮಗೆ ಲಾಭದಾಯಕವಾಗಿದೆ," ಎಂದು ಹೇಳಿದ್ದಾರೆ.

SCROLL FOR NEXT