ಕ್ರಿಕೆಟ್

ಬಿಸಿಸಿಐ ವಾರ್ಷಿಕ ಪುರಸ್ಕಾರ ಪ್ರಕಟ: ಜಸ್ಪ್ರೀತ್ ಬುಮ್ರಾಗೆ ಪಾಲಿ ಉಮ್ರಿಗರ್ ಪ್ರಶಸ್ತಿ, 

Raghavendra Adiga

ಪೂನಂ ಯಾದವ್ ಗೆ ಅತ್ಯುತ್ತಮ ಮಹಿಳಾಅಂ. ಕ್ರಿಕೆಟ್ ಆಟಗಾರ್ತಿ ಗೌರವ

ಬಿಸಿಸಿಐ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿದ್ದು  ಜಸ್ಪ್ರಿತ್ ಬುಮ್ರಾ 2018-19ರ ಕ್ರೀಡಾ ಋತುವಿನಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕ್ರಿಕೆಟ್ ಮಂಡಳಿ ಭಾನುವಾರ ನೀಡಿರುವ ಪ್ರಕಟಣೆಯಲ್ಲಿ ಬುಮ್ರಾ  ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನವಾಗಿದ್ದಾಗಿ ಘೋಷಿಸಿದೆ. ಮಹಿಳೆಯರಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಎಂದು ಪೂನಂ ಯಾದವ್  ಆಯ್ಕೆಯಾಗಿದ್ದಾರೆ. ಜನವರಿ 12 ರಂದು ನಡೆಯಲಿರುವ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗರಾದ ಕೃಷ್ಣಮಚಾರಿ ಶ್ರೀಕಾಂತ್ ಮತ್ತು ಅಂಜುಮ್ ಚೋಪ್ರಾ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.

ಈ ಋತುವಿನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಆರು ಟೆಸ್ಟ್ ಪಂದ್ಯಗಳಿಂದ ಬುಮ್ರಾ 34 ವಿಕೆಟ್ ಪಡೆದಿದ್ದು . ಏಕದಿನ ಪಂದ್ಯಗಳಲ್ಲಿ ಅವರು 17 ಪಂದ್ಯಗಳಿಂದ 31 ವಿಕೆಟ್‌, ಇನ್ನು ಕಡಿಮೆ ಆವೃತ್ತಿಯ ಕ್ರಿಕೆಟ್ ನಲ್ಲಿ 7 ಪಂದ್ಯಗಳಿಂದ 8 ವಿಕೆಟ್‌ಗಳನ್ನು ಪಡೆದಿದ್ದಾರೆ. 

ಅವರು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿ ಈ ಸಾಧನೆ ಮಾಡಿದ ಮೊದಲ ಮತ್ತು ಏಕೈಕ ಏಷ್ಯಾದ ಬೌಲರ್ ಎನಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಪಡೆದ ಹೆಚ್ಚಿನ ವಿಕೆಟ್‌ಗಳಿಗೆ ಬುಮ್ರಾ ದಿಲೀಪ್ ಸರ್ದೇಸಾಯಿ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. 

ಪೂನಮ್ ಅವರು ಸಹ ಈ ಋತುವಿನಲ್ಲಿ 8 ಮಹಿಳಾ ಏಕದಿನ ಪಂದ್ಯಗಳಿಂದ 14 ವಿಕೆಟ್ ಮತ್ತು 15 ಟಿ 20 ಐಗಳಲ್ಲಿ 20 ವಿಕೆಟ್ ಪಡೆದು ಸಾಧನೆ ಮೆರೆದಿದ್ದಾರೆ.  ಇತ್ತೀಚೆಗೆ ಅರ್ಜುನ ಪ್ರಶಸ್ತಿ ಪಡೆದ ಲೆಗ್ ಸ್ಪಿನ್ನರ್ ಪೂನಂ ಸಾಧನೆಗೆ ಈ ಪ್ರಶಸ್ತಿ ಇನ್ನೊಂದು ಗರಿಯಾಗಿ ಸೇರಿಕೊಳ್ಳುತ್ತಿದೆ.

ರಣಜಿ ಋತುವಿನಲ್ಲಿ ಬೆಸ್ಟ್ ಆಲ್ ರೌಂಡರ್ ಪ್ರದರ್ಶನ ಣೀದಿದ್ದ ಮುಂಬೈನ ಶಿವಮ್ ದುಬೆ  ಲಾಲಾ ಅಮರನಾಥ್ ಪ್ರಶಸ್ತಿ ಗಳಿಸಿದ್ದಾರೆ. 

SCROLL FOR NEXT