ಸಂಗ್ರಹ ಚಿತ್ರ 
ಕ್ರಿಕೆಟ್

'ಅಂದು ನಾನೇಕೆ ಡೈವ್ ಮಾಡಲಿಲ್ಲ'?: ಧೋನಿಗೆ ಕಾಡುತ್ತಿದೆ ವಿಶ್ವಕಪ್ ಪಶ್ಚತ್ಥಾಪ!

ಭಾರತ ಕ್ರಿಕೆಟ್ ತಂಡದ ಮಿಸ್ಚರ್ ಕೂಲ್ ಮಹೇಂದ್ರ ಸಿಂಗ್ ಧೋನಿ 2019ರ ಏಕದಿನ ವಿಶ್ವಕಪ್ ಸೋಲನ್ನು ಇನ್ನೂ ಮರೆತಂತೆ ಕಾಣುತ್ತಿಲ್ಲ. ಅವರಿಗೆ ಇನ್ನೂ ಆ ಪಂದ್ಯದ ಸೋಲಿನ ಪಶ್ಛಾತ್ಥಾಪ ಕಾಡುತ್ತಿದೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಿಸ್ಚರ್ ಕೂಲ್ ಮಹೇಂದ್ರ ಸಿಂಗ್ ಧೋನಿ 2019ರ ಏಕದಿನ ವಿಶ್ವಕಪ್ ಸೋಲನ್ನು ಇನ್ನೂ ಮರೆತಂತೆ ಕಾಣುತ್ತಿಲ್ಲ. ಅವರಿಗೆ ಇನ್ನೂ ಆ ಪಂದ್ಯದ ಸೋಲಿನ ಪಶ್ಛಾತ್ಥಾಪ ಕಾಡುತ್ತಿದೆ.

ಹೌದು.. ಇಂತಹುದೊಂದು ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲೂ ಧೋನಿ ತಮ್ಮ ಮನದಾಳದ ನೋವನ್ನು ಹೊರ ಹಾಕಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, 'ಅಂದು ನಾನೇಕೆ ಡೈವ್​ ಮಾಡಬಾರದಿತ್ತೆಂದು ನನ್ನಷ್ಟಕ್ಕೇ ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೇನೆ. ಧೋನಿ ನೀನು ಡೈವ್​ ಮಾಡಬಹುದಿತ್ತು ಎಂದು ನಾನೇ ಕೇಳಿಕೊಳ್ಳುತ್ತೇನೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ಸೆಮಿ ಫೈನಲ್ ​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಟೂರ್ನಿಯಿಂದ ಹೊರ ಬಿದ್ದಿತ್ತು, ಇಡೀ ಟೂರ್ನಿಯಲ್ಲಿ ಭಾರತ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿತ್ತು, ಆದರೆ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ಸೋಲು ಕಂಡು ನ್ಯೂಜಿಲೆಂಡ್ ತಂಡ ಫೈನಲ್ ಗೇರಿತ್ತು. 

ಅಂದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ ಮೂರು ಓವರುಗಳಲ್ಲಿ 32 ರನ್​ಗಳ ಅವಶ್ಯಕತೆ ಇದ್ದಾಗ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಜಡೇಜ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಇರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗೆಲುವಿನ ನಿರೀಕ್ಷೆಯನ್ನು ಕಾಯ್ದಿರಿಸಿತ್ತು. ಈ ನಿರೀಕ್ಷೆ ಹುಸಿಯಾಗಲ್ಲ ಎಂಬಂತೆ 48ನೇ ಓವರ್​ನ ಮೊದಲ ಎಸೆತವನ್ನು ಧೋನಿ ಸಿಕ್ಸರ್​ಗೆ ಅಟ್ಟಿದರು. ಈ ಹಂತದಲ್ಲಿ ಭಾರತಕ್ಕೆ ಗೆಲ್ಲಲು ಬೇಕಾಗಿದ್ದದ್ದು 10 ಎಸೆತಗಳಲ್ಲಿ 25 ರನ್​ಗಳು. ಒಂದೆಡೆ ಧೋನಿ ಮತ್ತೊಂದೆಡೆ ಭುವನೇಶ್ವರ್ ಕುಮಾರ್.  ಬೌಲಿಂಗ್​ನಲ್ಲಿ ಎಸೆಯುತ್ತಿದ್ದದ್ದು ನ್ಯೂಜಿಲೆಂಡ್​ ಪರ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಲೂಕಿ ಫೆರ್ಗುಸನ್. ಹೀಗಾಗಿ ಭುವಿಗೆ ಸ್ಟ್ರೈಕ್ ನೀಡದೇ ಉಳಿದ ಎಸೆತಗಳನ್ನು ಧೋನಿ ನಿರ್ಧರಿಸಿದ್ದರು. ಅದರಂತೆ ಲೆಗ್​​ ಸೈಡ್​ನಲ್ಲಿ ಬಾರಿಸಿದ ಧೋನಿ ಎರಡು ರನ್​ಗಳ ಓಟಕ್ಕೆ ಮುಂದಾಗಿದ್ದರು. ಆದರೆ ಬೌಂಡರಿ ಲೈನ್​ನಿಂದ ಓಡಿ ಬಂದ ಮಾರ್ಟಿನ್ ಗಪ್ಟಿಲ್ ಎಲ್ಲರ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದ್ದರು.

ಗಪ್ಟಿಲ್ ಎಸೆದ ಚೆಂಡು ನೇರವಾಗಿ ವಿಕೆಟ್​ಗೆ ಬಡಿಯಿತು. ಮಹೇಂದ್ರ ಸಿಂಗ್ ಧೋನಿ ರನೌಟ್​ಗೆ ಬಲಿಯಾದರು. ಈ ಒಂದು ರನೌಟ್​ನೊಂದಿಗೆ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ವಿಶ್ವಕಪ್​ ಕನಸು ಕಮರಿ ಹೋಯಿತು. 

ಇದೇ ಸೋಲು ಧೋನಿ ಕ್ರಿಕೆಟ್ ನಿಂದ ವೈರಾಗ್ಯ ಪಡೆಯುವಂತೆ ಮಾಡಿತ್ತು. ವಿಶ್ವಕಪ್ ಬಳಿಕ ಧೋನಿ ಕ್ರಿಕೆಟ್ ನಿಂದ ದೂರ ಉಳಿದಿದ್ದರು. ಆದರೆ ಇದೀಗ ಧೋನಿ ಅವರ ವಿದಾಯದ ಮಾತುಗಳು ಕೇಳಿಬರುತ್ತಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗಷ್ಟೇ ಟೀಮ್​ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರಿ ಧೋನಿ ನಿವೃತ್ತಿ ಬಗ್ಗೆ ಮಾತನಾಡಿ, ಧೋನಿ ಏಕದಿನ ಪಂದ್ಯಗಳಿಗೆ ಆದಷ್ಟು ಬೇಗ ನಿವೃತ್ತಿ ಘೋಷಿಸಲಿದ್ದಾರೆ. ಆದರೆ ಟಿ20 ಮಾದರಿ ಪಂದ್ಯಗಳನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT