ಕ್ರಿಕೆಟ್

ಭಾರತ ತಂಡದ ಬ್ಯಾಟಿಂಗ್ ವಿಭಾಗವನ್ನು ಕೊಂಡಾಡಿದ ರವಿಶಾಸ್ತ್ರಿ

Srinivas Rao BV

ಬೆಂಗಳೂರು: ಮೊದಲನೇ ಪಂದ್ಯದಲ್ಲಿ 10 ವಿಕೆಟ್ ಗಳ ಹೀನಾಯ ಸೋಲಿನ ಹೊರತಾಗಿಯೂ ಮೂರನೇ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ಗೆದ್ದು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿರುವ ಭಾರತ ತಂಡದ ಪ್ರದರ್ಶನವನ್ನು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಶ್ಲಾಘಿಸಿದ್ದಾರೆ.

ಪಂದ್ಯದ ಬಳಿಕ ಟಿವಿ ವಾಹಿನಿವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ”ನಮ್ಮ ತಂಡದ ಆಟಗಾರರು ಅದ್ಭುತ ಪ್ರದರ್ಶನ ತೋರಿದರು. ಮುಂಬೈ ಪಂದ್ಯದಲ್ಲಿನ ಸೋಲು, ಸತತ ಮೂರೂ ಪಂದ್ಯಗಳಲ್ಲಿನ ಟಾಸ್ ಸೋತರೂ ನಮ್ಮವರು ಎರಡೂ ಪಂದ್ಯಗಳಲ್ಲಿ ಸತತವಾಗಿ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದ್ದಾರೆ. ನಾವು ಕೆಳಮಟ್ಟದ ತಂಡದ ವಿರುದ್ಧ ಆಡಿದ್ದೇವೆ ಎಂದು ಯಾರೂ ಹೇಳಲಾರರು,” ಎಂದು ತಿಳಿಸಿದರು.

ಭಾನುವಾರದ ಪಂದ್ಯದ ಡೆತ್ ಓವರ್ ಗಳಲ್ಲಿ ಮೊಹಮ್ಮದ್ ಶಮಿ ಶತಕ ಗಳಿಸಿದ್ದ ಸ್ಟೀವನ್ ಸ್ಮಿತ್ ಸೇರಿದಂತೆ  ಮೂರು ವಿಕೆಟ್ ಕಿತ್ತರು. ಇದರಿಂದ ಆಸ್ಟ್ರೇಲಿಯಾ ತಂಡವನ್ನು 286/9 ಕ್ಕೆ ನಿಯಂತ್ರಿಸಲಾಗಿತ್ತು. ಆದರೆ, 27 ಇತರ ರನ್ ನೀಡಲಾಗಿತ್ತು.

SCROLL FOR NEXT