ಕ್ರಿಕೆಟ್

ಸ್ಟಂಪ್ಸ್  ಹಿಂದಿದ್ರೆ ಬ್ಯಾಟಿಂಗ್ ಗೆ  ನೆರವು- ಕೆಎಲ್ ರಾಹುಲ್ 

Nagaraja AB

ಆಕ್ಲಂಡ್ : ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್  ಮಾಡುವುದು ತ್ರಾಸದಾಯಕ ಕೆಲಸ. ಆದರೆ, ಹೆಚ್ಚುವರಿಯಾಗಿ ನೀಡಿರುವ ಹೊಣೆಗಾರಿಕೆಯನ್ನು ಪ್ರೀತಿಸುವುದಾಗಿ ಹೇಳುವ  ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ , ಇದರಿಂದ ತಮ್ಮಲ್ಲಿರುವ ಉತ್ತಮವಾದದ್ದು ಹೊರಬರಲಿದೆ ಎಂದಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಪಂದ್ಯದಲ್ಲಿ 27 ಎಸೆತಗಳಲ್ಲಿ 56 ರನ್ ಗಳಿಸಿದ ರಾಹುಲ್,  ಕೊಹ್ಲಿ ಜೊತೆಯಾಟದಲ್ಲಿ 99 ರನ್ ಗಳಿಂದ ನ್ಯೂಜಿಲೆಂಡ್ ನೀಡಿದ್ದ 203 ರನ್ ಗಳ ಗುರಿ ಮುಟ್ಟುವಲ್ಲಿ ಟೀಂ ಇಂಡಿಯಾಕ್ಕೆ ಪ್ರಮುಖ ನೆರವು ನೀಡಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್, ಅವರನ್ನೇ  ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಕೊಹ್ಲಿ ಮುಂದುವರೆಸಿದ್ದಾರೆ.

ಸ್ಟಂಪ್ಸ್ ಹಿಂದೆ ನಿಲ್ಲುವುದಕ್ಕೆ ಸಂತೋಷವಾಗುತ್ತದೆ. ಇದರಿಂದ ಆಟ ಆಡಲು ಪಿಚ್ ಹೇಗಿದೆ ಎಂಬ ಐಡಿಯಾ ದೊರೆಯುತ್ತದೆ. ಅದನ್ನು ಬೌಲರ್  ಹಾಗೂ ಕ್ಯಾಪ್ಟನ್ ಗೆ ನೀಡುತ್ತೇನೆ.  ಕೀಪರ್ ಆಗಿ ಚುರುಕಾಗಿ ಆಡುವ ಜೊತೆಗೆ ಇನ್ನೂ ಉತ್ತಮವಾಗಿ ಆಡಲು ಏನು ಅನ್ನಿಸುತ್ತದೆ ಅದನ್ನು ಕ್ಯಾಪ್ಟನ್ ಗೆ ಹೇಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT