ಆಕ್ಲೆಂಡ್: ಭಾರತದ ವಿರುದ್ಧ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಆಕ್ಲೆಂಡ್ ನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯವನ್ನು ಗೆದ್ದಿರುವ ಭಾರತ ತಂಡ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇಂದು 2ನೇ ಪಂದ್ಯವಾಗಿದ್ದು ಈ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ತವಕದಲ್ಲಿ ನ್ಯೂಜಿಲೆಂಡ್ ಇದ್ದು, 2ನೇ ಪಂದ್ಯವನ್ನೂ ಗೆದ್ದು ಸರಣಿ ಮೇಲೆ ಬಿಗಿ ಹಿಡಿತ ಸಾಧಿಸಬೇಕು ಎಂಬುದು ಟೀಂ ಇಂಡಿಯಾ ಯೋಜನೆಯಾಗಿದೆ.
ತಂಡಗಳು ಇಂತಿವೆ
ಭಾರತ: ರೋಹಿತ್ ಶರ್ಮಾ, ಲೋಕೇಶ್ ರಾಹುಲ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಜಸ್ ಪ್ರೀತ್ ಬುಮ್ರಾ
ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ಕೇನ್ ವಿಲಿಯಮ್ಸನ್ (ನಾಯಕ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಬ್ಲೇರ್ ಟಿಕ್ನರ್, ಟಿಮ್ ಸೌಥಿ, ಇಶ್ ಸೋಧಿ, ಹಮೀಶ್ ಬೆನೆಟ್
ಖಲೀಲ್ ಗೆ ಗಾಯ: ನ್ಯೂಜಿಲೆಂಡ್ ಪ್ರವಾಸದಿಂದ ಹೊರಕ್ಕೆ
ಏಷ್ಯಾಕಪ್ ಟೂರ್ನಿಗೆ ಭಾರತ ಬರದಿದ್ದರೆ, 2021ರ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಪಾಲ್ಗೊಳ್ಳುವುದಿಲ್ಲ: ಪಿಸಿಬಿ ಎಚ್ಚರಿಕೆ
ಟಿ20 ವಿಶ್ವಕಪ್: 4ನೇ ಕ್ರಮಾಂಕಕ್ಕೆ ನಾನು ಸ್ಪರ್ಧಿ, ಐಪಿಎಲ್ ಪ್ರದರ್ಶನ ನನ್ನ ತಾಕತ್ತನ್ನು ನಿರ್ಣಯಿಸಲಿದೆ: ರೈನಾ
ನಾಳೆ 2ನೇ ಟಿ20 ಪಂದ್ಯ: ಮುನ್ನಡೆಯ ತುಡಿತದಲ್ಲಿ ಟೀಮ್ ಇಂಡಿಯಾ