ಕ್ರಿಕೆಟ್

"ಒಡಿಐ ತಂಡದಿಂದ ಕೈ ಬಿಡುವಾಗ ಅಜಿಂಕ್ಯಾ ರೆಹಾನೆಯನ್ನು ಕಠಿಣವಾಗಿ ನಡೆಸಿಕೊಳ್ಳಲಾಗಿತ್ತು"

Srinivas Rao BV

ಭಾರತ ಏಕದಿನ ಪಂದ್ಯದ ತಂಡದಿಂದ ಬ್ಯಾಟ್ಸ್ ಮನ್ ಅಜಿಂಕ್ಯಾ ರೆಹಾನೆಯನ್ನು ಕೈಬಿಡುವಾಗ ಅವರೆಡೆಗೆ ನಡೆದಿದ್ದ ಅನ್ಯಾಯದ ನಡೆಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಬಾಯ್ಬಿಟ್ಟಿದ್ದಾರೆ. 

ಅಜಿಂಕ್ಯಾ ರೆಹಾನೆ ಎದುರಿಸಿದ್ದ ಅನ್ಯಾಯದ ವರ್ತನೆಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿರುವ ಆಕಾಶ್ ಚೋಪ್ರಾ, ಅಜಿಂಕ್ಯಾ ರೆಹಾನೆಗೆ ಅವರು ನಾಲ್ಕನೇ ಕ್ರಮಾಂಕದಲ್ಲಿ ತಂಡಕ್ಕೆ ಉತ್ತಮವಾಗಿ ಆಡುತ್ತಿದ್ದದ್ದನ್ನು ಪರಿಗಣಿಸಿ 50 ಓವರ್ ಫಾರ್ಮೆಟ್ ನಲ್ಲಿ ನೆರವಿನ ಹಸ್ತ ಚಾಚಬೇಕಿತ್ತು, ಆದರೆ ಅವರನ್ನು ಕಡೆಗಣಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

90 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ರೆಹಾನೆ 2,962 ರನ್ ಗಳನ್ನು ಗಳಿಸಿದ್ದು, 35.26 ರನ್ ರೇಟ್ ಹೊಂದಿದ್ದಾರೆ. 2018 ರಲ್ಲಿ ಬದಿಗೆ ಸರಿಸುವುದಕ್ಕೂ ಮುನ್ನ ಅಜಿಂಕ್ಯಾ ರೆಹಾನೆ 87 ಒಡಿಐ ಇನ್ನಿಂಗ್ಸ್ ನಲ್ಲಿ ಬ್ಯಾಟ್ ಬೀಸಲು ಸಿಕ್ಕ ಅವಕಾಶಗಳಲ್ಲಿ 3 ಸೆಂಚುರಿಗಳು 24 ಅರ್ಧಶತಕ ದಾಖಲಿಸಿದ್ದಾರೆ.

"4 ನೇ ಕ್ರಮಾಂಕದಲ್ಲಿ ಅಜಿಂಕ್ಯಾ ರೆಹಾನೆ ಅತ್ಯುತ್ತಮ ದಾಖಲೆ ಹೊಂದಿದ್ದರು. ಸ್ಟ್ರೈಕ್ ರೇಟ್ 94 ಇದ್ದರೂ ಸಹ ಅವರಿಗೇಕೆ ನಂತರದ ದಿನಗಳಲ್ಲಿ ಅವಕಾಶ ಸಿಗಲಿಲ್ಲ? ಇದರಿಂದ ರೆಹಾನೆಗೆ ಅನ್ಯಾಯವಾಗಿದೆ, ಅವರೆಡೆಗೆ ಅನ್ಯಾಯದ, ಕಠಿಣ ವರ್ತನೆ ತೋರಲಾಗಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

SCROLL FOR NEXT