ಕ್ರಿಕೆಟ್

ಮತ್ತೊಬ್ಬ ಗವಾಸ್ಕರ್‌-ತೆಂಡೂಲ್ಕರ್‌ ರೂಪಿಸುವುದು ಅಸಾಧ್ಯ: ಪಾಕ್ ಮಾಜಿ ಕ್ರಿಕೆಟಿಗ ಮಿಯಾಂದಾದ್‌

Vishwanath S

ನವದೆಹಲಿ: ಭಾರತೀಯ ಕ್ರಿಕೆಟ್‌ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಸುನೀಲ್‌ ಗವಾಸ್ಕರ್‌ ಕೂಡ ಒಬ್ಬರು. ಅವರು 1987ರಲ್ಲಿ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಒಬ್ಬ ಅದ್ಭುತ ಆಟಗಾರನನ್ನು ಕಳೆದುಕೊಳ್ಳುತ್ತಿದ್ದೇವೆಂದು ಕಣ್ಣೀರು ಹಾಕಿದ್ದರು. ಭಾರತ ತಂಡದಲ್ಲಿ ಗವಾಸ್ಕರ್ ಇಲ್ಲ ಎಂಬ ನೋವು ಕೆಲವು ವರ್ಷಗಳ ಕಾಲ ಅಭಿಮಾನಿಗಳಲ್ಲಿ ಇತ್ತು.

16ನೇ ವಯಸ್ಸಿನಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಟೀಮ್‌ ಇಂಡಿಯಾಗೆ ಆಗಮಿಸುವವರೆಗೂ ಗವಾಸ್ಕರ್‌ ಇಲ್ಲದ ಕೊರಗು ತಂಡದಲ್ಲಿತ್ತು. 1989ರಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಚಿನ್‌ ತೆಂಡೂಲ್ಕರ್ ಪದಾರ್ಪಣೆ ಮಾಡಿದರು. ನಂತರ, 90 ದಶಕದ ಆರಂಭದಲ್ಲಿ ಸಚಿನ್‌, ಹಂತ-ಹಂತವಾಗಿ ತಂಡದಲ್ಲಿ ಗುರುತಿಸಿಕೊಂಡರು.

ತಮ್ಮ ವಿಶಿಷ್ಠ ಶೈಲಿಯ ಬ್ಯಾಟಿಂಗ್‌ ಮೂಲಕ ಎಲ್ಲರ ಚಿತ್ತ ಕದ್ದ ಕ್ರಿಕೆಟ್‌ ದೇವರು, ಇಡೀ ವಿಶ್ವದಲ್ಲಿಯೇ ಅಭಿಮಾನಿಗಳನ್ನು ಸಂಪಾದಿಸಿದರು. ಬಳಿಕ 2000 ಇಸವಿಯ ಹೊತ್ತಿಗೆ ವಿಶ್ವ ಕ್ರಿಕೆಟ್‌ ಅನ್ನು ಆಳಿದರು. ಎರಡು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಹಲವಾರು ದಾಖಲೆಗಳನ್ನು ಮಾಡಿದ ಸಚಿನ್‌, 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

SCROLL FOR NEXT