ವಸಂತ್ ರೈಜಿ 
ಕ್ರಿಕೆಟ್

ಭಾರತದ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗ ವಸಂತ್ ರೈಜಿ ನಿಧನ

ಭಾರತದ ಅತ್ಯಂತ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗನಾಗಿದ್ದ ವಸಂತ್ ರೈಜಿ ಶನಿವಾರ ಮುಂಜಾನೆ ಮುಂಬೈನಲ್ಲಿ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು.

ಮುಂಬೈ: ಭಾರತದ ಅತ್ಯಂತ ಹಿರಿಯ ಪ್ರಥಮ ದರ್ಜೆ ಕ್ರಿಕೆಟಿಗನಾಗಿದ್ದ ವಸಂತ್ ರೈಜಿ  ಶನಿವಾರ ಮುಂಜಾನೆ ಮುಂಬೈನಲ್ಲಿ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಹಾಗೂ ಇಬ್ಬರು  ಪುತ್ರಿಯರನ್ನು ಅಗಲಿದ್ದಾರೆ.ರೈಜಿ  ಮುಂಜಾನೆ 2.20 ಕ್ಕೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ವೃದ್ಧಾಪ್ಯದಿಂದಾಗಿ ನಿಧನರಾದರು ಎಂದು  ಅವರ ಅಳಿಯ ಸುದರ್ಶನ್ ನಾನಾವತಿ ಪಿಟಿಐಗೆ ತಿಳಿಸಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಆಗಿರುವ ರೈಜಿ 1940 ರ ದಶಕದಲ್ಲಿ ಒಂಬತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 277 ರನ್ ಗಳಿಸಿದರು, ಇನ್ನಿಂಗ್ಸ್ ನಲ್ಲಿ 68 ರನ್ ಗಳಿಸಿದ್ದು ಅವರ ತ್ಯಧಿಕ ಸ್ಕೋರ್ ಆಗಿದೆ.

ಅವರು 1939 ರಲ್ಲಿ ನಾಗ್ಪುರದಲ್ಲಿ ಸೆಂಟ್ರಲ್ ಪ್ರಾವಿನೆನ್ಸ್ ಮತ್ತು ಬೆರಾರ್ ನಡುವೆ ನಡೆದ ಪಂದ್ಯದ ಮೂಲಕ ಕೆಟ್ ಕ್ಲಬ್ ಆಫ್ ಇಂಡಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದರು.ಮುಂಬೈನಲ್ಲಿನ ಅವರ ಚೊಚ್ಚಲ ಪಂದ್ಯವು 1941 ರಲ್ಲಿ ವಿಜಯ್ ಮರ್ಚೆಂಟ್ ನೇತೃತ್ವದಲ್ಲಿವೆಸ್ಟರ್ನ್ ಇಂಡಿಯಾ ಜತೆಗೆ ಆಡಿದ್ದಾಗಿತ್ತು. ದಕ್ಷಿಣ ಮುಂಬೈನ ಬಾಂಬೆ ಜಿಮ್ಖಾನಾದಲ್ಲಿ ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡುವಾಗ ಕ್ರಿಕೆಟ್ ಇತಿಹಾಸಕಾರ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರೈಜಿಗೆ 13 ವರ್ಷ.

ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರು ಜನವರಿಯಲ್ಲಿ 100 ನೇ ವರ್ಷಕ್ಕೆ ಕಾಲಿಟ್ಟಿದ್ದ ರೈಜಿ ಅವರುಗೆ ಶುಭಕೋರಲು ಅವರ ನಿವಾಸಕ್ಕೆ ಸೌಜನ್ಯದ ಭೇಟಿ ಕೊಟ್ಟಿದ್ದರು.

ಶನಿವಾರ ಮಧ್ಯಾಹ್ನ ದಕ್ಷಿಣ ಮುಂಬೈನ ಚಂದನ್ವಾಡಿ ಶವಾಗಾರದಲ್ಲಿ ರೈಜಿ ಅವರ  ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Nepal: ಸಾಮಾಜಿಕ ಮಾಧ್ಯಮ ಬ್ಯಾನ್ ವಿರುದ್ಧ ಪ್ರತಿಭಟನೆ; ಯುವಕರ ಮೇಲೆ ಪೊಲೀಸರ ಗುಂಡು; 16 ಮಂದಿ ಸಾವು; ಸೇನೆ ನಿಯೋಜನೆ; Video!

ಅಕ್ರಮ ಬೆಟ್ಟಿಂಗ್ ಪ್ರಕರಣ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ 14 ದಿನ ನ್ಯಾಯಾಂಗ ಬಂಧನ

ಆಸ್ತಿಗಾಗಿ ತಂದೆಯ ಹತ್ಯೆ: ಮೃತದೇಹದ ಪಕ್ಕದಲ್ಲೇ ರಾತ್ರಿ ಕಳೆದ ಮಗ!

Couple Romance: ರೈಲಿನಲ್ಲಿ ಜನರ ಎದುರೆ ತಬ್ಬಿಕೊಂಡು ಚುಂಬಿಸಿ ಯುವ ಜೋಡಿ 'ರಾಸಲೀಲೆ'; ಮುಜುಗರಕ್ಕೀಡಾದ ಪ್ರಯಾಣಿಕರು, Video!

ಮತ್ತೆ ಅಬ್ಬರಿಸಲಿದ್ದಾನೆ ಮಳೆರಾಯ: 3 ದಿನ ರಾಜ್ಯಾದ್ಯಂತ ವರ್ಷಧಾರೆ, ಯೆಲ್ಲೋ ಅಲರ್ಟ್ ಘೋಷಣೆ

SCROLL FOR NEXT