ಮೊಹಮದ್ ಹಫೀಜ್ 
ಕ್ರಿಕೆಟ್

ಪಾಸಿಟಿವ್, ನೆಗೆಟಿವ್, ಮತ್ತೆ ಕೊರೋನಾ ಪಾಸಿಟಿವ್: ಪಾಕ್ ಕ್ರಿಕೆಟಿಗ ಮೊಹಮದ್ ಹಫೀಜ್ ಸುತ್ತ ರಹಸ್ಯಗಳ ಹುತ್ತ!

ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರ ಸುತ್ತಮುತ್ತ ಎಂಥದ್ದೊ ರಹಸ್ಯ ಸುತ್ತುವರಿದಂತಿದೆ. ಯಾಕೆಂದರೆ ಕೊರೊನಾ ವೈರಸ್‌ ಮೊದಲ  ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿತ್ತು.

ಕರಾಚಿ: ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರ ಸುತ್ತಮುತ್ತ ಎಂಥದ್ದೊ ರಹಸ್ಯ ಸುತ್ತುವರಿದಂತಿದೆ. ಯಾಕೆಂದರೆ ಕೊರೊನಾ ವೈರಸ್‌ ಮೊದಲ  ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿತ್ತು.

ಅನಂತರ ಹಫೀಜ್ ತಾನು ಕೊರೊನಾ ನೆಗೆಟಿವ್ ಎಂದಿದ್ದರು. ಮತ್ತೀಗ ಪಾಕ್ ಕ್ರಿಕೆಟ್ ಬೋರ್ಡ್, ಹಫೀಜ್ ಫಲಿತಾಂಶ ಪಾಸಿಟಿವ್ ಎಂದು ಘೋಷಿಸಿದೆ! 

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ನಿಮಿತ್ತ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತನ್ನ 29 ಜನರಿರುವ ತಂಡ, 12 ಮಂದಿ ಸಿಬ್ಬಂದಿ ಸೇರಿಸಿ ಕೊರೊನಾವೈರಸ್ ಪರೀಕ್ಷೆ ನಡೆಸಿತ್ತು. ಈ ವೇಳೆ ಮೊಹಮ್ಮದ್ ಹಫೀಜ್‌ ಸೇರಿ ಒಟ್ಟು 10 ಮಂದಿ ಆಟಗಾರರ ಫಲಿತಾಂಶ ಪಾಸಿಟಿವ್ ಎಂದು ಬಂದಿತ್ತು. 

ಇದಾದ ಮರುದಿನವೇ ಹಫೀಜ್ ತಾನು ಕೊರೊನಾ ನೆಗೆಟಿವ್ ಎಂದು ಘೋಷಿಸಿ ಪಿಸಿಬಿಗೆ ಇರಿಸುಮುರುಸು ತಂದಿದ್ದರು. ಖಾಸಗಿ ಮೆಡಿಕಲ್ ಸೌಲಭ್ಯವಿದ್ದೆಡೆ ಪರೀಕ್ಷೆ ನಡೆಸಿದ್ದ ಹಫೀಜ್ ಫಲಿತಾಂಶ ನೆಗೆಟಿವ್ ಬಂದಿತ್ತು. ಇದರಿಂದ ಪಿಸಿಬಿ ಹಫೀಜ್ ವಿರುದ್ಧ ಕೆಂಡಾಮಂಡಲವಾಗಿತ್ತು.

ಹೀಗಾಗಿ ಅಸಮಾಧಾನಗೊಂಡ ಪಿಸಿಬಿ, ಹಫೀಜ್‌ಗೆ ಮರು ಪರೀಕ್ಷೆ ನಡೆಸಿತ್ತು. ಇದರಲ್ಲಿ ಮತ್ತೆ ಹಫೀಜ್‌ಗೆ ಕೊರೊನಾ ಪಾಸಿಟಿವ್ಎಂದು ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ವೋಟ್ ಚೋರಿಯಿಂದ ಕಾನೂನು ಚೋರಿ' : ಇಡೀ ವ್ಯವಸ್ಥೆ ನಾಶಕ್ಕೆ ಬಿಜೆಪಿ ಸಂಚು,EC, ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ!

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗಕ್ಕೆ BJP ಶಾಸಕ ಪತ್ರ: ಬಿಕೆ ಹರಿಪ್ರಸಾದರಿಂದ ದಾಖಲೆ ಬಿಡುಗಡೆ!

Biggboss ಕಚಡ ಶೋ: ಮೂರ್ಖರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತದೆ, ಶೋ ನಿಲ್ಲಿಸಿ; ಸ್ಟಾಂಡ್ಅಪ್ ಕಾಮಿಡಿಯನ್ ಆಕ್ರೋಶ!

ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ರೂ. 2.500 ಆರ್ಥಿಕ ನೆರವು: ಬ್ಯಾಂಕ್ ಖಾತೆಗಳಿಗೆ ನೇರ ಜಮೆ!

'ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ': ದೇಶ ದ್ರೋಹಿ ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಲಿ; 48 ಗಂಟೆಗಳ ಗಡುವು ನೀಡಿದ CJP!