ಕ್ರಿಕೆಟ್

 ಟಿ-20 ವಿಶ್ವಕಪ್: ಫೈನಲ್ ಪ್ರವೇಶಿಸಿದ ಆಸೀಸ್ ವನಿತೆಯರು, ಭಾನುವಾರ ಭಾರತದ ವಿರುದ್ಧ ಕಾದಾಟ!

Nagaraja AB

ಸಿಡ್ನಿ: ಮಹಿಳಾ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿಫೈನಲ್ಸ್ ಪಂದ್ಯಕ್ಕೂ ಮಳೆ ಕಾಟ ನೀಡಿದ್ದು, ಡಕ್ವರ್ತ್ ಲೂಯಿಸ್ ನಿಯಮದ ಆಧಾರದ ಮೇಲೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ 5 ರನ್ ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿ, ಸತತ ಆರನೇ ಬಾರಿಗೆ ಟೂರ್ನಿಯ ಫೈನಲ್ ಪ್ರವೇಶಿಸಿದೆ. 

ಭಾನುವಾರ ಮೆಲ್ಬೂರ್ನ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

ಮೊದಲ ಆವೃತ್ತಿಯನ್ನು ಹೊರತು ಪಡಿಸಿ ಆಸ್ಟ್ರೇಲಿಯಾ ಎಲ್ಲ ಐದೂ ವಿಶ್ವಕಪ್ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದು, ಇದು ಆರನೇ ಬಾರಿ ಆಗಿದೆ. 2010, 2012, 2014, 2018ರಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. 2016ರಲ್ಲಿ ಆಸೀಸ್ ವಿಂಡೀಸ್ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತ್ತು. 
  
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಗೆ 134 ರನ್ ಸೇರಿಸಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 13 ಓವರ್ ಗಳಲ್ಲಿ 5 ವಿಕೆಟ್ ಗೆ 92 ರನ್ ಸೇರಿಸಿದ್ದಾಗ ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮದಂತೆ ಕಾಂಗರೂ ಪಡೆ ಪ್ರಶಸ್ತಿ ಸುತ್ತು ಪ್ರವೇಶಿಸಿತು.
  
ಮೊದಲು ಬ್ಯಾಟ್ ಮಾಡಿದ ಆಸೀಸ್ ತಂಡದ ಅಲಿಸಾ ಹೀಲಿ 18, ಬೆತ್ ಮೂನಿ 28 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ನಾಯಕಿ ಮ್ಯಾಗ್ ಲ್ಯಾನ್ನಿಂಗ್ 49 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 49 ರನ್ ಬಾರಿಸಿ ಮಿಂಚಿದರು. ದಕ್ಷಿಣ ಆಫ್ರಿಕಾದ ಪರ ನಾಡಿನ್ ಡಿ ಕ್ಲರ್ಕ್ 4 ಓವರ್ ಬೌಲಿಂಗ್ ನಡೆಸಿ 19 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. 
  
ದಕ್ಷಿಣ ಆಫ್ರಿಕಾ ಪರ ಲಾರಾ ವೊಲ್ವಾರ್ಡ್ ಅಜೇಯ 41, ಸುನೆ ಲೂಸ್ 21, ಲಿಜೆಲ್ಲೆ ಲೀ 10 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಆಆಸೀಸ್ 13 ಓವರ್ ಗಳಲ್ಲಿ 5 ವಿಕೆಟ್ ಗೆ 92 ರನ್ ಸೇರಿಸಿತ್ತು. ಆಗ ಮಳೆ ಬಂದಿದ್ದರಿಂದ ಆಸ್ಟ್ರೇಲಿಯಾ ಪಂದ್ಯ ಗೆದ್ದು ಬೀಗಿತು.

SCROLL FOR NEXT