ಎಂ ಎಸ್ ಧೋನಿ 
ಕ್ರಿಕೆಟ್

ಎಲ್ಲರಂತೆ ನನಗೂ ಒತ್ತಡ, ಭಯ ಇರುತ್ತಿತ್ತು, ತಂಡದಲ್ಲಿ ಮೆಂಟಲ್‌ ಕಂಡೀಷನಿಂಗ್ ಕೋಚ್‌ ಇರಬೇಕು: ಧೋನಿ

ಇತ್ತೀಚಿಗೆ ಬಹುತೇಕ ಆಟಗಾರರು ಮಾನಸಿಕ ಸ್ವಾಸ್ಥ್ಯದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಹೀಗಾಗಿ ತಂಡದಲ್ಲಿ ಸದಾ ಮೆಂಟಲ್‌ ಕಂಡೀಷನಿಂಗ್‌ ಕೋಚ್....

ನವದೆಹಲಿ: ಇತ್ತೀಚಿಗೆ ಬಹುತೇಕ ಆಟಗಾರರು ಮಾನಸಿಕ ಸ್ವಾಸ್ಥ್ಯದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಹೀಗಾಗಿ ತಂಡದಲ್ಲಿ ಸದಾ ಮೆಂಟಲ್‌ ಕಂಡೀಷನಿಂಗ್‌ ಕೋಚ್‌ (ಮಾನಸಿಕ ಆರೋಗ್ಯ ಸುಧಾರಣೆ ಮಾರ್ಗದರ್ಶಕ) ಇರಲೇ ಬೇಕು ಎಂದು ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಹೇಳಿದ್ದಾರೆ.

"ಭಾರತದಲ್ಲಿ ಮಾನಸಿಕ ಸ್ವಾಸ್ಥ್ಯ ವಿಚಾರದಲ್ಲಿ ತೊಂದರೆ ಅನುಭವಿಸುತ್ತಿರುವುದನ್ನು ಆಟಗಾರರು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಯಾರೂ ಈ ಬಗ್ಗೆ ಮಾತನಾಡುವುದೂ ಇಲ್ಲ. ಎಲ್ಲರಂತೆ ನನಗೂ ಭಯ, ಒತ್ತಡ ಇರುತ್ತದೆ. ನಾನು ಬ್ಯಾಟ್‌ ಮಾಡಲು ಹೋದಾಗ ಮೊದಲ 5-10 ಎಸೆತಗಳನ್ನು ಎದುರಿಸಲು ಎದೆ ನಡುಗುತ್ತಿರುತ್ತದೆ. ಒತ್ತಡ ಆವರಿಸಿರುತ್ತದೆ. ಭಯ ಕಾಡುತ್ತಿರುತ್ತದೆ. ಇದು ಪ್ರತಿಯೊಬ್ಬರನ್ನೂ ಕಾಡುತ್ತದೆ ಕೂಡ," ಎಂದು ಧೋನಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

"ಈ ಸಂಗತಿಯನ್ನು ಕೋಚ್‌ ಬಳಿ ಚರ್ಚಿಸಲು ಆಟಗಾರರು ಅಂಜುತ್ತಾರೆ. ಅದಕ್ಕಾಗಿಯೇ ಕೋಚ್‌ ಮತ್ತು ಆಟಗಾರರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಮೆಂಟಲ್‌ ಕಂಡೀಷನಿಂಗ್‌ ಕೋಚ್‌ 15 ದಿನಗಳಿಗೊಮ್ಮೆ ತಂಡಕ್ಕೆ ಭೇಟಿ ನೀಡುವುದಲ್ಲ. 15 ದಿನಗಳಿಗೆ ಒಮ್ಮೆ ಬಂದರೆ ಕೇವಲ ಅನುಭವವನ್ನಷ್ಟೇ ಹಂಚಿಕೊಳ್ಳಲು ಸಾಧ್ಯ. ಹೀಗಾಗಿ ಆಟಗಾರರ ಜೊತೆಗೆ ಅವರು ಸದಾ ಇರಬೇಕು. ಈ ಮೂಲಕ ಎಲ್ಲಿ ಆಟಗಾರನಿಗೆ ಸಮಸ್ಯೆ ಎದುರಾಗುತ್ತಿದೆ ಎಂಬುದನ್ನು ಅವರು ತಿಳಿದು ಅದನ್ನು ಬಗೆಹರಿಸಲು ಸಾಧ್ಯವಾಗುತ್ತದೆ," ಎಂದು ಧೋನಿ ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್