ಕ್ರಿಕೆಟ್

ಭಾರತದೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಫಿಯಾ ನಂಟು: ಪಾಕ್ ಮಾಜಿ ಕ್ರಿಕೆಟಿಗ ಅಕಿಬ್ ಜಾವೆದ್

Vishwanath S

ಲಾಹೋರ್: ಭಾರತದೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಫಿಯಾ ನಂಟಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಅಕಿಬ್ ಜಾವೆದ್ ಆರೋಪಿಸಿದ್ದಾರೆ.

ಪಾಕಿಸ್ತಾನ ಮೂಲದ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಜಾವೆದ್, ಐಪಿಎಲ್ ಟೂರ್ನಿಯಲ್ಲಿ ಹಿಂದೆಯೇ ಮ್ಯಾಚ್ ಫಿಕ್ಸಿಂಗ್ ಸುಳಿವು ದೊರೆತಿದೆ. ಆದರೆ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವ ಎದೆಗಾರಿಕೆ ಯಾರಿಗೂ ಇಲ್ಲ. ಪರದೆೆ ಹಿಂದಿರುವವರು ಈ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ.

ಜಿಯೋ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಅವರು, "ಈ ಹಿಂದೆ ಐಪಿಎಲ್ ನಲ್ಲಿನ ಮ್ಯಾಚ್ ಫಿಕ್ಸಿಂಗ್ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಹೀಗಾಗಿ ಮ್ಯಾಚ್ ಫಿಕ್ಸಿಂಗ್ ಭಾರತದೊಂದಿಗೆ ಸಂಬಂಧ ಹೊಂದಿದೆ," ಎಂದು ಹೇಳಿದ್ದಾರೆ.

ಇದಲ್ಲದೆ ನೀವು ಫಿಕ್ಸಿಂಗ್ ನಲ್ಲಿ ಭಾಗಿಯಾಗಲು ಒಂದು ಬಾರಿ ನಿರ್ಧರಿಸಿದರೆ ಅದರಿಂದ ಹೊರಬರುವ ಸಾಧ್ಯತೆ ಇಲ್ಲ. ಫಿಕ್ಸಿಂಗ್ ವಿರುದ್ಧ ಯಾರೊಬ್ಬರು ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಮಧ್ಯಮ ವೇಗಿ ಜಾವೆದ್ ಪಾಕ್ ಪರ 22 ಟೆಸ್ಟ್ ಮತ್ತು 163 ಏಕದನ ಪಂದ್ಯಗಳನ್ನಾಡಿದ್ದು, ಅನುಕ್ರಮವಾಗಿ 54 ಮತ್ತು 182 ವಿಕೆಟ್ ಗಳನ್ನು ಉರುಳಿಸಿದ್ದಾರೆ.

SCROLL FOR NEXT