ಇರ್ಫಾನ್ ಪಠಾಣ್ 
ಕ್ರಿಕೆಟ್

ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಸಜ್ಜಾದ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್!

ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್  ಕ್ಯಾಂಡಿ ಟಸ್ಕರ್ಸ್ ಫ್ರ್ಯಾಂಚೈಸಿಗಾಗಿ  ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ನಲ್ಲಿ ಆಡಲು ಸಜ್ಜಾಗಿದ್ದಾರೆ.

ಕೊಲಂಬೋ: ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್  ಕ್ಯಾಂಡಿ ಟಸ್ಕರ್ಸ್ ಫ್ರ್ಯಾಂಚೈಸಿಗಾಗಿ  ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ನಲ್ಲಿ ಆಡಲು ಸಜ್ಜಾಗಿದ್ದಾರೆ.

ಕ್ರಿಸ್ ಗೇಲ್, ಕುಸಲ್ ಪೆರೆರಾ, ಕುಸಲ್ ಮೆಂಡಿಸ್ ಮತ್ತು ನುವಾನ್ ಪ್ರದೀಪ್,ಇಂಗ್ಲೆಂಡ್ ಬಲಗೈ ವೇಗದ ಬೌಲರ್ ಲಿಯಾಮ್ ಪ್ಲಂಕೆಟ್ ಕೂಡ ಕ್ಯಾಂಡಿ ತಂಡದಲ್ಲಿದ್ದಾರೆ.

"ಎಲ್​ಪಿಎಲ್​ನಲ್ಲಿ ಕ್ಯಾಂಡಿ ಫ್ರ್ಯಾಂಚೈಸಿ ಪರ ಆಡಲು ನಾನು ಉತ್ಸುಕನಾಗಿದ್ದೇನೆ. ತಂಡದಲ್ಲಿ ಆಕರ್ಷಕ ಆಟಗಾರರಿದ್ದು ಅವರೊಂದಿಗಿನ ಅನುಭವಕ್ಕಾಗಿ ಎದುರು ನೋಡುತ್ತಿದ್ದೇನೆ" ಇರ್ಫಾನ್ ಪಠಾಣ್ ಹೇಳಿದ್ದಾರೆ.

ಶ್ರೀಲಂಕಾದ ಮಾಜಿ ನಾಯಕ ಹಸನ್ ತಿಲಕರತ್ನೆಕ್ಯಾಂಡಿ ಕೋಚಿಂಗ್ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದಾರೆ.

ಆಲ್‌ರೌಂಡರ್ ಪಠಾಣ್ ಅವರನ್ನು ಸ್ವಾಗತಿಸಿದ ಕ್ಯಾಂಡಿ ಫ್ರಾಂಚೈಸಿ ಮಾಲೀಕ ಮತ್ತು ಬಾಲಿವುಡ್ ನಟ ಸೊಹೈಲ್ ಖಾನ್, "ಇರ್ಫಾನ್ ಸೇರ್ಪಡೆ ತಂಡದ ಶಕ್ತಿಯನ್ನು  ಹೆಚ್ಚಿಸುವುದಲ್ಲದೆ ಅವರ ಅನುಭವವು ತಂಡಕ್ಕೆ ದೊಡ್ಡ ಆಸ್ತಿಯಾಗಲಿದೆ" ಎಂದು ಹೇಳಿದರು

ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ವಿ.ಪಿ ಮತ್ತು ಎಲ್‌ಪಿಎಲ್ ಟೂರ್ನಮೆಂಟ್ ನಿರ್ದೇಶಕ ರವಿನ್ ವಿಕ್ರಮ ರತ್ನ, "ಇರ್ಫಾನ್ ಪಠಾಣ್ ಅತ್ಯಾಕರ್ಷಕ ಆಲ್‌ರೌಂಡರ್ ಮತ್ತು ಎಲ್‌ಪಿಎಲ್‌ನಲ್ಲಿ ಕ್ಯಾಂಡಿ ಪರವಾಗಿ ಅವರನ್ನು ನೋಡಲು ಅಭಿಮಾನಿಗಳು ಕಾತುರಗೊಂಡಿದ್ದಾರೆನ್ನುವುದು ನನಗೆ ಖಾತ್ರಿಯಿದೆ" ಎಂದರು.

ಲಂಕಾ ಪ್ರೀಮಿಯರ್ ಲೀಗ್ನವೆಂಬರ್ 21 ರಿಂದ ಡಿಸೆಂಬರ್ 13, 2020 ರವರೆಗೆ ಎರಡು ಸ್ಥಳಗಳಲ್ಲಿ ನಡೆಯಲಿದೆ. ಪ್ರಶಸ್ತಿಗಾಗಿ 15 ದಿನಗಳ ಅವಧಿಯಲ್ಲಿ 23 ಪಂದ್ಯಗಳಿದ್ದು , ಕೊಲಂಬೊ, ಕ್ಯಾಂಡಿ, ಗ್ಯಾಲೆ, ಡಂಬುಲ್ಲಾ, ಮತ್ತು ಜಾಫ್ನಾ ಹೆಸರಿನ ಐದು ಫ್ರಾಂಚೈಸಿ ತಂಡಗಳು ಸೆಣೆಸಲಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT