ಐಪಿಎಲ್ 2020 
ಕ್ರಿಕೆಟ್

ಟಿವಿ ವೀಕ್ಷಣೆಯಲ್ಲಿ ದಾಖಲೆ ಬರೆದ ಐಪಿಎಲ್ 2020; ವೀಕ್ಷಕರ ಪ್ರಮಾಣ ಶೇ.28ರಷ್ಟು ಹೆಚ್ಚಳ!

ಕೊರೋನಾ ಸಾಂಕ್ರಾಮಿಕದ ನಡುವೆ ಪ್ರೇಕ್ಷಕರಹಿತವಾಗಿ ಆಯೋಜನೆಯಾಗಿದ್ದ ಐಪಿಎಲ್ 2020 ಟೂರ್ನಿಯ ವೀಕ್ಷಕತ್ವ ದಾಖಲೆ ಬರೆದಿದೆ, 

ದುಬೈ: ಕೊರೋನಾ ಸಾಂಕ್ರಾಮಿಕದ ನಡುವೆ ಪ್ರೇಕ್ಷಕರಹಿತವಾಗಿ ಆಯೋಜನೆಯಾಗಿದ್ದ ಐಪಿಎಲ್ 2020 ಟೂರ್ನಿಯ ವೀಕ್ಷಕತ್ವ ದಾಖಲೆ ಬರೆದಿದೆ, 

ಹೌದು..ಕೊರೋನಾ ಸಾಂಕ್ರಾಮಿಕದ ನಡುವೆಯೇ ಆಯೋಜನೆಯಾಗಿದ್ದ ಐಪಿಎಲ್ ಟೂರ್ನಿಯ ವೀಕ್ಷಕತ್ವದಲ್ಲಿ ಬರೊಬ್ಬರಿ ದಾಖಲೆಯ ಶೇ.28ರಷ್ಟು ಏರಿಕೆ ಕಂಡು ಬಂದಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಈ ಬಗ್ಗೆ ಮಾತನಾಡಿರುವ ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಅವರು, ಐಪಿಎಲ್ ತನ್ನ ಅಭಿಮಾನಿಗಳಿಗೆ ವಿಶ್ವ ದರ್ಜೆಯ ಕ್ರೀಡಾಕೂಟವನ್ನು ಒದಗಿಸಲು ಯಾವಾಗಲೂ ಪ್ರಯತ್ನಿಸುತ್ತದೆ. ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಡ್ರೀಮ್ ಇಲೆವೆನ್ ಸಂಸ್ಥೆಗೆ ಧನ್ಯವಾದಗಳು,  ಡ್ರೀಮ್ 11 ಐಪಿಎಲ್ 2020 ರ ಶೀರ್ಷಿಕೆ ಪ್ರಾಯೋಜಕರಾಗಿ ಮುಂದೆ ಬಂದಿದ್ದಾರೆ. ಡ್ರೀಮ್ 11 ನಂತಹ ಡಿಜಿಟಲ್ ಸ್ಪೋರ್ಟ್ಸ್ ಬ್ರ್ಯಾಂಡ್ ಐಪಿಎಲ್ ಗೆ ಪ್ರಾಯೋಜಕತ್ವ ವಹಿಸುತ್ತಿರುವುದು ಖುಷಿಯ ವಿಚಾರ ಎಂದು ಹೇಳಿದ್ದಾರೆ.

ಇದೇ ವೇಳೆ ಡಿಜಿಟಲ್ ಪ್ಲಾಟ್ ಫಾರಂ ಅನ್ನು ಸಮರ್ಪಕವಾಗಿ ಬಳಸಿಕೊಂಡ ಮುಂಬೈ, ರಾಜಸ್ಥಾನ ತಂಡಗಳು ಈ ಪ್ಲಾಟ್ ಫಾರ್ಮ್ ನಲ್ಲಿ ತಮ್ಮದೇ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದವು. ಇಂತಹ ಪ್ರಯತ್ನಗಳೂ ಕೂಡ  ಟೂರ್ನಿಯ ಯಶಸ್ಸಿಗೆ ಕಾರಣ. ಮುಂಬೈ ಇಂಡಿಯನ್ ಲೈವ್, ಪಲ್ಟಾನ್ ಪ್ಲೇ ನಂತಹ ಸಮುದಾಯ ಕಾರ್ಯಕ್ರಮಗಳು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾದವು ಎಂದು ಪಟೇಲ್ ಹೇಳಿದರು.

ಇದೇ ವೇಳೆ ಮಾತನಾಡಿದ ಡ್ರೀಮ್ 11 ಮಾರುಕಟ್ಟೆ ಮುಖ್ಯಸ್ಥ ವಿಕ್ರಾಂತ್ ಮುದಲಿಯಾರ್ ಅವರು, ಐಪಿಎಲ್ ಭಾರತದ ಅತಿದೊಡ್ಡ ಕ್ರೀಡಾಕೂಟವಾಗಿದ್ದು, ಇದು ಅತಿ ಹೆಚ್ಚು ಅಭಿಮಾನಿಗಳ ಉತ್ಸಾಹಕ್ಕೆ ಸಾಕ್ಷಿಯಾಗಿದೆ, ಮತ್ತು ಡ್ರೀಮ್ 11  ಈ ದೊಡ್ಡ ಟೂರ್ನಿಯ ಪಾತ್ರವಾಗಿರುವುದು ಕೂಡ  ನಮಗೆ ಖುಷಿ ನೀಡಿದೆ ಎಂದು ಹೇಳಿದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT