ಐಸಿಸಿ 
ಕ್ರಿಕೆಟ್

ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಕನಿಷ್ಠ 15 ವರ್ಷ ವಯಸ್ಸಾಗಿರಬೇಕು: ಐಸಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ವಯಸ್ಸಿನ ನೀತಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜಾರಿಗೆ ತಂದಿದೆ. ಈ ನಿಯಮದ ಅನ್ವಯ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಆಡಬೇಕಾದರೆ ಆಟಗಾರನಿಗೆ ಕಡ್ಡಾಯವಾಗಿ 15 ವರ್ಷ ವಯಸ್ಸಾಗಿರಬೇಕು. 

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ವಯಸ್ಸಿನ ನೀತಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜಾರಿಗೆ ತಂದಿದೆ. ಈ ನಿಯಮದ ಅನ್ವಯ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಆಡಬೇಕಾದರೆ ಆಟಗಾರನಿಗೆ ಕಡ್ಡಾಯವಾಗಿ 15 ವರ್ಷ ವಯಸ್ಸಾಗಿರಬೇಕು. 

ಐಸಿಸಿ ಈ ನಿಯಮವನ್ನು ಜಾರಿಗೊಳಿಸಿದ ಹೊರತಾಗಿಯೂ ದೇಶಗಳು ಇನ್ನೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆಯನ್ನು ಹೊಂದಿವೆ ಹಾಗೂ ಅಸಾಧಾರಣ ಸನ್ನಿವೇಶಗಳಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನಿಗೆ ಆಯಾ ದೇಶಕ್ಕಾಗಿ ಆಡಲು ಅವಕಾಶ ನೀಡಲು ಮಂಡಳಿಗಳು ಐಸಿಸಿಗೆ ಅರ್ಜಿ ಸಲ್ಲಿಸಬಹುದು.

ಐಸಿಸಿ ಸ್ಪರ್ಧೆಗಳು, ದ್ವಿಪಕ್ಷೀಯ ಸರಣಿ ಮತ್ತು 19 ವಯೋಮಿತಿ ಸೇರಿದಂತೆ ಎಲ್ಲಾ ಕ್ರಿಕೆಟ್‌ನಲ್ಲಿ ಅನ್ವಯವಾಗುವಂತೆ ಆಟಗಾರರ ಸುರಕ್ಷತೆಯನ್ನು ಸುಧಾರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಕನಿಷ್ಠ ವಯಸ್ಸಿನ ನಿರ್ಬಂಧಗಳನ್ನು ಪರಿಚಯಿಸಿರುವುದನ್ನು ದೃಢಪಡಿಸಿದೆ. 

ಪುರುಷ ಅಥವಾ ಮಹಿಳೆಯರ ಕ್ರಿಕೆಟ್‌ನಲ್ಲಿ 19 ವಯೋಮಿತಿ ಹಾಗೂ ಯಾವುದೇ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು 15 ವರ್ಷ ವಯಸ್ಸನ್ನು ನಿಗದಿಪಡಿಸಲಾಗಿದೆ ಎಂದು ಐಸಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಬ್ಬು ಬೆಳೆಗಾರರ ಕಿಚ್ಚು: ಬೆಳಗಾವಿಯಲ್ಲಿ ಪೊಲೀಸರ ಲಾಠಿ ಚಾರ್ಜ್ ವಿರುದ್ಧ ಸಿಡಿದೆದ್ದ ರೈತರು; ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ!

ಸಿದ್ದರಾಮಯ್ಯ ಕೆಳಗಿಳಿಸುವುದು ಅಷ್ಟು ಸುಲಭವಲ್ಲ, ಅವರ ಸಾಮರ್ಥ್ಯದ ಬಗ್ಗೆ ನಮಗಷ್ಟೇ ಗೊತ್ತು: ಎಚ್‌ಡಿಕೆ

Video: ಬಸ್ ನಲ್ಲಿ ಯುವತಿಯ ಟೀ-ಶರ್ಟ್ ನೊಳಗೆ ಕೈಹಾಕಿದ ಭೂಪ, 'ಧರ್ಮದೇಟು'..!

ಬಿಹಾರದಲ್ಲಿ ದಾಖಲೆ ಮತದಾನ ಮೋದಿ-ನಿತೀಶ್ ಮೇಲಿನ ನಂಬಿಕೆಗೆ ಸಾಕ್ಷಿ: ಪ್ರಧಾನಿ

ದೆಹಲಿಯಲ್ಲಿ ಮತ ಚಲಾಯಿಸಿದ ಬಿಜೆಪಿ ನಾಯಕರು ಬಿಹಾರದಲ್ಲೂ ವೋಟ್ ಮಾಡಿದ್ದಾರೆ: ರಾಹುಲ್ ಗಾಂಧಿ

SCROLL FOR NEXT