ಪಾಕಿಸ್ತಾನದ ಆಟಗಾರರು 
ಕ್ರಿಕೆಟ್

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನದ ಆರು ಆಟಗಾರರಿಗೆ ಕೋವಿಡ್-19 ಪಾಸಿಟಿವ್ 

ಡಿಸೆಂಬರ್ 18 ರಿಂದ ಆಕ್ಲಂಡ್ ನಲ್ಲಿ ಆರಂಭವಾಗಲಿರುವ ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳಿಗಾಗಿ ತೆರಳಿರುವ ಪಾಕಿಸ್ತಾನದ ಆರು ಮಂದಿ ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. 

ಕ್ರಿಸ್ಟ್ ಚರ್ಚ್:  ಡಿಸೆಂಬರ್ 18 ರಿಂದ ಆಕ್ಲಂಡ್ ನಲ್ಲಿ ಆರಂಭವಾಗಲಿರುವ ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳಿಗಾಗಿ ತೆರಳಿರುವ ಪಾಕಿಸ್ತಾನದ ಆರು ಮಂದಿ ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. 

ನ್ಯೂಜಿಲೆಂಡ್ ಕ್ರಿಕೆಟ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ಜೈವಿಕ ಸುರಕ್ಷಿತ ಶಿಷ್ಟಾಚಾರವನ್ನು ಪಾಕ್ ಆಟಗಾರರು ಉಲ್ಲಂಘಿಸಿದ್ದು, ಕ್ವಾರಂಟೈನ್ ನಲ್ಲಿ ತರಬೇತಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಬಾಬರ್ ಅಜಾಂ ನೇತೃತ್ವದ ಪಾಕ್ ತಂಡ ಮಂಗಳವಾರ ನ್ಯೂಜಿಲೆಂಡ್ ಗೆ ಆಗಮಿಸಿದ್ದು, ಕೋವಿಡ್-19 ಶಿಷ್ಟಾಚಾರದ ಪ್ರಕಾರ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ.

ಕೊರೋನಾವೈರಸ್ ತಗುಲಿರುವ ಆಟಗಾರರ ಹೆಸರನ್ನು ಬಹಿರಂಗಪಡಿಸದ ನ್ಯೂಜಿಲೆಂಡ್ ಕ್ರಿಕೆಟ್, ಎಲ್ಲಾ ಆರು ಆಟಗಾರರನ್ನು ಐಸೋಲೇಷನ್ ನಲ್ಲಿ ಇಡಲಾಗುವುದು, ಈ ಸಂಬಂಧ ಪಾಕಿಸ್ತಾನದ ಆಟಗಾರರೊಂದಿಗೆ ಚರ್ಚಿಸಲಾಗುವುದು  ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ