ಕ್ರಿಕೆಟ್

ಕೊಹ್ಲಿಗಿಂತ ಬಾಬರ್‌ ಅಜಮ್‌ಗೆ ಬೌಲಿಂಗ್‌ ಮಾಡುವುದು ಕಷ್ಟ: ಮೊಹಮ್ಮದ್ ಅಮೀರ್‌

Vishwanath S

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗಿಂತ ಬಾಬರ್‌ ಅಝಮ್‌ಗೆ ಬೌಲಿಂಗ್‌ ತುಂಬಾನೆ ಕಠಿಣವೆಂದು ಪಾಕಿಸ್ತಾನ ತಂಡದ ಎಡಗೈ ವೇಗಿ ಮೊಹಮ್ಮದ್‌ ಅಮೀರ್‌ ಬಹಿರಂಗಪಡಿಸಿದ್ದಾರೆ.

ಕಳೆದ 2016ರ ಏಷ್ಯಾ ಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ವಿರುದ್ಧ ಸ್ಮರಣಾರ್ಥ ಸ್ಪೆಲ್‌ಗಳನ್ನು ಮಾಡಿದ್ದೇನೆ. ಅಲ್ಲದೆ, ಟಿ20 ವಿಶ್ವಕಪ್‌ ಹಾಗೂ 2017 ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ತಂಡದ ನಾಯಕನಿಗೆ ಬೌಲಿಂಗ್‌ ಮಾಡಿರುವುದು ಮೋಹಕವಾಗಿತ್ತು. ಆದರೆ ತಮ್ಮದೇ ದೇಶದ  ಬಾಬರ್‌ ಅಝಮ್‌ಗೆ ಬೌಲಿಂಗ್‌ ಮಾಡುವುದು ತುಂಬಾ ಕಷ್ಟವೆಂದು ಎಡಗೈ ವೇಗಿ ಹೇಳಿಕೊಂಡಿದ್ದಾರೆ. 

ಬುಧವಾರ ಕ್ರಿಕೆಟ್‌ ಪಾಕಿಸ್ತಾನದೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, "ತಾಂತ್ರಿಕವಾಗಿ ಹೇಳುವುದಾದರೆ, ಬಾಬರ್‌ ವಿರುದ್ಧ ಬೌಲಿಂಗ್‌ ಮಾಡಿ ಗೆಲ್ಲುವುದು ಕಷ್ಟ. ಅವರ ಬ್ಯಾಟಿಂಗ್‌ ಸ್ಟ್ಯಾನ್ಸ್ ನೋಡುತ್ತಿದ್ದರೆ, ಅವರನ್ನು ಹೇಗೆ ಔಟ್‌ ಮಾಡಬೇಕೆಂಬ ಉಪಾಯ ಒಳಿಯುವುದಿಲ್ಲ. ಅವರಿಗಿಂತ ಸ್ವಲ್ಪ ಹೊರಗಡೆ ಬೌಲಿಂಗ್‌ ಮಾಡಿದರೆ, ಸುಲಭವಾಗಿ ಡ್ರೈವ್‌ ಮಾಡುತ್ತಾರೆ ಹಾಗೂ ಅದೇ ಎಸೆತವನ್ನು ಸ್ವಿಂಗ್‌ ಮಾಡಿದರೆ ಫ್ಲಿಕ್‌ ಮಾಡುತ್ತಾರೆ. ನೆಟ್ಸ್‌ನಲ್ಲಿ ಅವರಿಗೆ ಎಷ್ಟೇ ಬೌಲಿಂಗ್‌ ಮಾಡಿದರೂ, ಅವರನ್ನು ಔಟ್‌ ಮಾಡುವುದು ತುಂಬಾ ಕಷ್ಟ ಎನಿಸಿದೆ. ಅವರನ್ನು ಔಟ್‌ ಮಾಡುವ ರೀತಿ ಕಾಣುತ್ತಿಲ್ಲ ಎಂದು ಹೇಳಿದರು. 

SCROLL FOR NEXT