ರಶೀದ್-ಅನುಷ್ಕಾ 
ಕ್ರಿಕೆಟ್

ರಶೀದ್ ಖಾನ್ ಪತ್ನಿ ಎಂದು ಗೂಗಲ್‌ ಸರ್ಚ್‌ ಮಾಡಿದರೆ ಅನುಷ್ಕಾ ಶರ್ಮಾ ಹೆಸರು, ಕಾರಣವೇನು?

ಅಫ್ಘಾನಿಸ್ತಾನದ ಕ್ರಿಕೆಟಿಗ ರಶೀದ್‌ ಖಾನ್‌ ಸದ್ಯ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಅದ್ಭುತ ಬೌಲಿಂಗ್‌ ಮಾಡುವ ಮೂಲಕ ಸುದ್ದಿಯಲ್ಲಿ ಇರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಇದಕ್ಕಿಂತ ವಿಭಿನ್ನವಾದ ವಿಷಯದೊಂದಿಗೆ ಸ್ಟಾರ್‌ ಆಲ್‌ರೌಂಡರ್‌ ಇದೀಗ ಸುದ್ದಿಯಾಗಿದ್ದಾರೆ.

ನವದೆಹಲಿ: ಅಫ್ಘಾನಿಸ್ತಾನದ ಕ್ರಿಕೆಟಿಗ ರಶೀದ್‌ ಖಾನ್‌ ಸದ್ಯ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಅದ್ಭುತ ಬೌಲಿಂಗ್‌ ಮಾಡುವ ಮೂಲಕ ಸುದ್ದಿಯಲ್ಲಿ ಇರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಇದಕ್ಕಿಂತ ವಿಭಿನ್ನವಾದ ವಿಷಯದೊಂದಿಗೆ ಸ್ಟಾರ್‌ ಆಲ್‌ರೌಂಡರ್‌ ಇದೀಗ ಸುದ್ದಿಯಾಗಿದ್ದಾರೆ.

ಅದೇನೆಂದರೆ, ಗೂಗಲ್‌ನಲ್ಲಿ ರಶೀದ್ ಖಾನ್‌ ಪತ್ನಿ ಯಾರೆಂದು ಸರ್ಚ್‌ ಕೊಟ್ಟರೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಎಂದು ತೋರಿಸುತ್ತಿದೆ. ತಮಾಷೆ ಅಂದುಕೊಂಡಿದ್ದೀರಾ, ಖಂಡಿತಾ ನಿಜ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ ಶಾಟ್‌ ಕೂಡ ಅಪ್‌ಲೋಡ್‌ ಮಾಡಲಾಗಿದೆ. ಜಸ್ಟ್ ನೀವು, 'ರಶೀದ್‌ ಖಾನ್‌ ವೈಫ್‌' ಎಂದು ಗೂಗಲ್‌ನಲ್ಲಿ ಸರ್ಚ್‌ ಮಾಡಿದರೆ ಸಾಕು, ಇದನ್ನೂ ನೀವೇ ಕಣ್ಣಾರೆ ನೋಡಬಹುದು.

ಅನುಷ್ಕಾ ಶರ್ಮಾ ಎಲ್ಲರಿಗೂ ಗೊತ್ತಿರುವ ಸೆಲೆಬ್ರಿಟಿ. ಬಾಲಿವುಡ್‌ ಪ್ರಖ್ಯಾತ ಸ್ಟಾರ್‌ ನಟಿಯರಲ್ಲಿ ಅನುಷ್ಕಾ ಶರ್ಮಾ ಕೂಡ ಒಬ್ಬರು. ಇದಕ್ಕಿಂತ ಮುಖ್ಯವಾಗಿ ಅನುಷ್ಕಾ ಶರ್ಮಾ ಅವರು  ಟೀಮ್‌ ಇಂಡಿಯಾ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿಯ ಪತ್ನಿ. ಆದರೂ, ಗೂಗಲ್‌ನಲ್ಲಿ ತಪ್ಪು ಮಾಹಿತಿ ಏಕೆ ಬರುತ್ತಿದೆ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡುತ್ತಿರುವುದು ಸಹಜ. ನಿಮ್ಮ ಎಲ್ಲಾ ಅನುಮಾನಗಳಿಗೂ ಉತ್ತರ ಮುಂದಿದೆ.

ರಶೀದ್‌ ಖಾನ್‌ ಅಫ್ಘಾನಿಸ್ತಾನ ಕ್ರಿಕೆಟ್‌ ತಂಡದ ಉಪ ನಾಯಕ. ಸದ್ಯ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಬಾದ್‌ ತಂಡದಲ್ಲಿ ಆಡುತ್ತಿದ್ದಾರೆ. 2018ರಲ್ಲಿ ಭಾರತದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯವಾಡಿದ ಅಫ್ಘಾನಿಸ್ತಾನದ ಅಂತಿಮ 11 ಆಟಗಾರರಲ್ಲಿ ರಶೀದ್ ಖಾನ್‌ ಕೂಡ ಒಬ್ಬರು. ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ರಶೀದ್‌ ಖಾನ್ ತಮ್ಮ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದರು. ಆ ಮೂಲಕ ಟೆಸ್ಟ್ ತಂಡವನ್ನು ಮುನ್ನಡೆಸಿದ ಅತ್ಯಂತ ಕಿರಿಯ ನಾಯಕ ಎಂಬ ಸಾಧನೆಗೂ ಅವರು ಭಾಜನರಾಗಿದ್ದರು.

ಕೊಹ್ಲಿ-ಅನುಷ್ಕಾ

ನೀವು ಗೂಗಲ್‌ನಲ್ಲಿ 'ರಶೀದ್‌ ಖಾನ್‌ ವೈಫ್‌' ಎಂದು ಸರ್ಚ್‌ ಕೊಟ್ಟರೆ, ಅನುಷ್ಕಾ ಶರ್ಮಾ ಅವರ ಫೇಜ್‌ ಓಪನ್‌ ಆಗುತ್ತಿದೆ. ಇದರಲ್ಲಿ ರಶೀದ್‌ ಖಾನ್‌ ಅವರ ಕಿರು ಜೀವನ ಚರಿತ್ರೆ ಲಭ್ಯವಾಗಲಿದೆ. ಇದರಲ್ಲಿ ವೈವಾಹಿಕ ವಿಭಾಗದಲ್ಲಿ ಮದುವೆಯಾಗಿದೆ ಎಂಬ ಮಾಹಿತಿ ತೋರಿಸುತ್ತಿದ್ದು, ಪತ್ನಿಯ ಹೆಸರಿನ ಜಾಗದಲ್ಲಿ ಅನುಷ್ಕಾ ಶರ್ಮಾ ಎಂದು ಕಾಣುತ್ತಿದೆ. ಮದುವೆ ದಿನಾಂಕದ ಸ್ಥಳದಲ್ಲಿ ವಿರಾಟ್‌ ಕೊಹ್ಲಿ ಉಲ್ಲೇಖಿಸಿರುವ ದಿನಾಂಕ 2017ರ ಡಿಸೆಂಬರ್‌ 11 ಎಂದು ಕಾಣಿಸುತ್ತಿದೆ.

'ರಶೀದ್‌ ಖಾನ್‌ ವೈಫ್‌' ಎಂದು ಸರ್ಚ್‌ ಕೊಟ್ಟರೆ ಏಕೆ ಈ ರೀತಿಯ ಫಲಿತಾಂಶ ಬರುತ್ತಿದೆ?: 2018ರಲ್ಲಿ ಇನ್‌ಸ್ಟಾಗ್ರಾಮ್‌ ಚಾಟ್‌ನಲ್ಲಿ ನಿಮ್ಮ ನೆಚ್ಚಿನ ಬಾಲಿವುಟ್‌ ತಾರೆಯರು ಯಾರೆಂದು ಅಭಿಮಾನಿಗಳು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ರಶೀದ್‌ ಖಾನ್‌, ಅನುಷ್ಕಾ ಶರ್ಮಾ ಹಾಗೂ ಪ್ರೀತಿ ಝಿಂಟಾ ಎಂದು ಹೇಳಿದ್ದರು. ಈ ರೀತಿ ಆಲ್‌ರೌಂಡರ್‌ ಹೇಳಿದ್ದರಿಂದ, ಅಂದಿನಿಂದ ಇಲ್ಲಿಯವರೆಗೂ ಈ ಫಲಿತಾಂಶ ಬರುತ್ತಿದೆ.

ರಶೀದ್ ಖಾನ್‌ ನಿಜಕ್ಕೂ ಮದುವೆಯಾಗಿದ್ದಾರೆಯೇ? ಖಂಡಿತಾ ಇಲ್ಲ. ಅನುಷ್ಕಾ ಶರ್ಮಾ, ರಶೀದ್‌ ಖಾನ್‌ ಪತ್ನಿಯಲ್ಲ, ಇದು ನಿಮಗೂ ಗೊತ್ತಿರುವ ವಿಚಾರ. ಅಂದಹಾಗೆ ರಶೀದ್‌ ಇನ್ನೂ ಮದುವೆಯಾಗಿಲ್ಲ. ಮದುವೆ ವಿಚಾರವನ್ನು ಸಂದರ್ಶನವೊಂದರಲ್ಲಿ ಈ ಹಿಂದೆ ಕೇಳಲಾಗಿತ್ತು. ಈ ವೇಳೆ ಉತ್ತರಿಸಿದ್ದ ಅವರು, ಅಫ್ಘಾನಿಸ್ತಾನ ಒಮ್ಮೆ ವಿಶ್ವಕಪ್‌ ಗೆದ್ದಾಗ, ನಿಶ್ಚಿತಾರ್ಥ ಮಾಡಿಕೊಂಡು, ಮದುವೆಯಾಗುತ್ತೇನೆ," ಎಂದು ಹೇಳಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Watch| Traffic Fine ಗೆ ಶೇ.50 ರಷ್ಟು ರಿಯಾಯಿತಿ; ವಂಚಕರಿಂದ ಮೋಸಹೋದ ಟೆಕ್ಕಿ!; Dharmasthala Case: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ SIT ದಾಳಿ; ಮೊಬೈಲ್ ವಶಕ್ಕೆ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT