ಕ್ರಿಕೆಟ್

ಪಾಕಿಸ್ತಾನ ವೇಗಿ ಉಮರ್ ಗುಲ್ ಕ್ರಿಕೆಟ್ ಗೆ ಗುಡ್ ಬೈ

Raghavendra Adiga

ಕರಾಚಿ: ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಟಿ 20 ಕಪ್ ಮುಗಿದ ನಂತರ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಪಾಕಿಸ್ತಾನ ವೇಗಿ ಉಮರ್ ಗುಲ್ ಶನಿವಾರ ಪ್ರಕಟಿಸಿದ್ದಾರೆ.

2016 ರಲ್ಲಿ ಪಾಕಿಸ್ತಾನ ಪರವಾಗಿ ಏಕದಿನ ಪಂದ್ಯವೊಂದರಲ್ಲಿ ಆಡಿದ 36 ವರ್ಷದ ಗುಲ್, ಭಾನುವಾರ ಕೊನೆಗೊಳ್ಳುವ ರಾಷ್ಟ್ರೀಯ ಟಿ 20 ಕಪ್‌ನಲ್ಲಿ ಬಲೂಚಿಸ್ತಾನ್ ತಂಡದ ಒಅರವಾಗು ಆಡುತ್ತಿದ್ದಾರೆ.

ರಾವಲ್ಪಿಂಡಿಯಲ್ಲಿ ಶುಕ್ರವಾರ ದಕ್ಷಿಣ ಪಂಜಾಬ್ (ಪಾಕಿಸ್ತಾನ) ವಿರುದ್ಧ ಸೆಮಿಫೈನಲ್ ಪಂದ್ಯದಿಂದ ಗುಲ್ ಹೊರಗುಳಿದಿದ್ದರು.

"ತುಂಬಾ ಭಾರವಾದ ಹೃದಯದಿಂದ ಮತ್ತು ಸಾಕಷ್ಟು ಆಲೋಚನೆಯ ನಂತರ, ಈ ರಾಷ್ಟ್ರೀಯ ಟಿ 20 ಕಪ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ವಿದಾಯ ಹೇಳಲು ನಾನು ನಿರ್ಧರಿಸಿದ್ದೇನೆ" ಎಂದು 36 ವರ್ಷದ ಕ್ರಿಕೆಟಿಗೆ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ,

"ನಾನು ಯಾವಾಗಲೂ ನನ್ನ ಪೂರ್ಣ ಹೃದಯದಿಂದ ಮತ್ತು 100% ಕಠಿಣ ಪರಿಶ್ರಮದಿಂದ ಪಾಕಿಸ್ತಾನ ಪರ ಆಡಿದ್ದೇನೆ. ಕ್ರಿಕೆಟ್ ಯಾವಾಗಲೂ ನನ್ನ ಪ್ರೀತಿ ಮತ್ತು ಉತ್ಸಾಹಕ್ಕೆ ಕಾರಣವಾಗಿರುತ್ತದೆ. ಆದರೆ ಎಲ್ಲವೂ ಒಳ್ಳೆಯದಾಗಿದ್ದರೂ ಒಂದು ಬಾರಿ ಕೊನೆಗೊಳ್ಳಲೇಬೇಕಾಗಿದೆ." ಎಂದು ಅವರು ಹೇಳಿದರು.

ಪೇಶಾವರ ಮೂಲದ ಗುಲ್ 2003 ರಲ್ಲಿ ಏಕದಿನ ಪಂದ್ಯವೊಂದರ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆ ವರ್ಷವೇ ಅವರು ತಮ್ಮ ಮೊದಲ ಟೆಸ್ಟ್ ಆಡಿದರು. ಅವರ ಕೊನೆಯ ಟೆಸ್ಟ್ 2013 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವಾಗಿತ್ತು. 47 ಟೆಸ್ಟ್ ಪಂದ್ಯಗಳಿಂದ ಗುಲ್ 34.06 ಸರಾಸರಿಯಲ್ಲಿ 163 ವಿಕೆಟ್ ಪಡೆದರು. ಅಲ್ಲದೆ 130 ಏಕದಿನ ಪಂದ್ಯಗಳಿಂದ 179 ವಿಕೆಟ್‌ಗಳ ಜೊತೆಗೆ 60 ಟಿ 20 ಐಗಳಿಂದ 85 ವಿಕೆಟ್‌ಗಳನ್ನು ಪಡೆದಿದ್ದಾರೆ.

"ಭವಿಷ್ಯವು ನನಗೆ ಹೆಚ್ಚಿನದನ್ನು ನೀಡುತ್ತದೆ ಎಂದುಭಾವಿಸಿದ್ದೇನೆ. ನಾನು ಪಿಸಿಬಿ ಮತ್ತು ನನ್ನ ಕ್ರಿಕೆಟಿಂಗ್ ಪ್ರಯಾಣದ ಭಾಗವಾಗಿರುವ ಎಲ್ಲಾ ತರಬೇತುದಾರರು ಮತ್ತು ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಮಾಧ್ಯಮಗಳಿಗೆ ವಿಶೇಷ ಧನ್ಯವಾದಗಳು, ನನ್ನ ಅಭಿಮಾನಿಗಳು ಮತ್ತು ಅನುಯಾಯಿಗಳು ಎಲ್ಲ ಸಮಯದಲ್ಲೂ ನನ್ನನ್ನು ಬೆಂಬಲಿಸಿದ್ದರು"ಗುಲ್ ಹೇಳಿದರು.

SCROLL FOR NEXT