ಮೋರಿಸ್-ಹಾರ್ದಿಕ್ 
ಕ್ರಿಕೆಟ್

ಪಂದ್ಯದ ವೇಳೆ ಕ್ರಿಸ್‌ ಮೋರಿಸ್‌-ಹಾರ್ದಿಕ್‌ ನಡುವೆ ಮಾತಿನ ಚಕಮಕಿ: ಐಪಿಎಲ್‌ ನೀತಿ ಸಂಹಿತೆ ಉಲ್ಲಂಘನೆ

ಹದಿಮೂರನೇ ಆವೃತ್ತಿಯ ಐಪಿಎಲ್‌ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರಿನ ಕ್ರಿಸ್‌ ಮೋರಿಸ್‌ ನಡುವೆ ಮಾತಿನ ಚಕಮಕಿ ನಡೆದಿತ್ತು.

ಅಬುಧಾಬಿ: ಹದಿಮೂರನೇ ಆವೃತ್ತಿಯ ಐಪಿಎಲ್‌ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರಿನ ಕ್ರಿಸ್‌ ಮಾರಿಸ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದು ಐಪಿಎಲ್‌ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಮೋರಿಸ್ ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.5 ಅನ್ನು ಒಪ್ಪಿಕೊಂಡರೆ, ಪಾಂಡ್ಯ ಲೆವೆಲ್ 1 ಅಪರಾಧ 2.20 ಅನ್ನು ಒಪ್ಪಿಕೊಂಡಿದ್ದಾರೆ.

ಇಲ್ಲಿನ ಶೇಖ್‌ ಝಾಹೆದ್‌ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು 164 ರನ್‌ಗಳನ್ನು ಗಳಿಸಿತ್ತು. ನಂತರ 165 ರನ್‌ಗಳ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ 19.1 ಓವರ್‌ಗಳಿಗೆ ಗೆಲುವಿನ ದಡ ಸೇರಿತು. ಪಂದ್ಯ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 16 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಇನ್ನಷ್ಟು ಗಟ್ಟಿಮಾಡಿಕೊಂಡಿತು. 

ಗುರಿ ಹಿಂಬಾಲಿಸುವ ವೇಳೆ ಮುಂಬೈ ಇಂಡಿಯನ್ಸ್ ಇನಿಂಗ್ಸ್‌ನಲ್ಲಿ ಸೂರ್ಯಕುಮಾರ್ ಯಾದವ್‌ ಬ್ಯಾಟಿಂಗ್‌ ಆಕರ್ಷಕವಾಗಿತ್ತು. ಇದರ ನಡುವೆ ಕ್ರಿಸ್‌ ಮಾರಿಸ್‌ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೊನೆಯ ಎರಡು ಓವರ್‌ಗಳಿಗೆ 16 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ ಮಾಡಿದ ಕ್ರಿಸ್‌ ಮಾರಿಸ್‌ಗೆ ಮೂರು ಎಸೆತಗಳಲ್ಲಿ ಹಾಲಿ ಚಾಂಪಿಯನ್ಸ್ ಮೂರು ರನ್‌ಗಳನ್ನು ಗಳಿಸಿತು. ನಂತರ ಹಾರ್ದಿಕ್‌ ಪಾಂಡ್ಯ ಸಿಕ್ಸರ್‌ ಸಿಡಿಸಿದರು. ಈ ವೇಳೆಯೇ ಮೋರಿಸ್‌ ಹಾಗೂ ಹಾರ್ದಿಕ್‌ ನಡುವೆ ಮಾತಿಗೆ ಮಾತು ಬೆಳೆಯಿತು. 

ನಂತರ ಮುಂದಿನ ಎಸೆತದಲ್ಲಿ ಆರ್‌ಸಿಬಿ ವೇಗಿ ಕ್ರಿಸ್‌ ಮಾರಿಸ್‌ ಮುನ್ನಡೆ ಸಾಧಿಸಿದರು. 26ರ ಪ್ರಾಯದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ ಮತ್ತೊಂದು ಬೌಂಡರಿ ಸಿಡಿಸಲು ಪ್ರಯತ್ನಿಸಿದರು. ಅನಿರೀಕ್ಷಿತವಾಗಿ ನೇರವಾಗಿ ಹೆಚ್ಚುವರಿ ಕವರ್ಸ್‌ನಲ್ಲಿದ್ದ ಯುಜ್ವೇಂದ್ರ ಚಹಲ್‌ಗೆ ಕ್ಯಾಚ್‌ ನೀಡಿದರು. ಈ ವೇಳೆ ಹಾರ್ದಿಕ್‌ ಪಾಂಡ್ಯ ಹಾಗೂ ವೇಗಿ ಕ್ರಿಸ್‌ ಮೋರಿಸ್ ನಡುವೆ ಮಾತಿನ ಚಕಮಕಿ ಇನ್ನಷ್ಟು ತಾರಕ್ಕಕ್ಕೇರಿತು.

ಅಷ್ಟಕ್ಕೆ ಮಾತಿನ ಸಂಘರ್ಷ ನಿಲ್ಲಲಿಲ್ಲ, ಔಟ್‌ ಆಗಿದ್ದಕ್ಕೆ ಬೇಸರವಾಗಿದ್ದ ಪಾಂಡ್ಯ, ಕ್ರಿಸ್‌ ಮಾರಿಸ್‌ ಕಡೆ ಬೆರಳು ತೋರಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕ್ರಿಸ್ ಮಾರಿಸ್ ಅವರನ್ನು ಖಂಡಿಸಲಾಗಿದೆ. ಮೋರಿಸ್ ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.5 ಅನ್ನು ಒಪ್ಪಿಕೊಂಡರೆ, ಪಾಂಡ್ಯ ಲೆವೆಲ್ 1 ಅಪರಾಧ 2.20 ಅನ್ನು ಒಪ್ಪಿಕೊಂಡಿದ್ದಾರೆ.

"ಅಬುಧಾಬಿಯಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡ್ರೀಮ್ ಇಲೆವೆನ್‌ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲ್‌ರೌಂಡರ್‌ ಕ್ರಿಸ್ ಮೋರಿಸ್ ಅವರನ್ನು ಖಂಡಿಸಲಾಗಿದೆ. ಮಾರಿಸ್ ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.5 ಅನ್ನು ಒಪ್ಪಿಕೊಂಡಿದ್ದಾರೆ," ಎಂದು ಐಪಿಎಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಐಪಿಎಲ್‌ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಖಂಡಿಸಲಾಗಿದೆ. ಪಾಂಡ್ಯ ಐಪಿಎಲ್ ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.20 ಅನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT